ಬೆಂಗಳೂರು; ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಮದುವೆ ಬಳಿಕ ಸಿನಿಮಾಗಳ ಆಯ್ಕೆಯ ವಿಚಾರದಲ್ಲಿ ಹೆಚ್ಚು ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಸೂಕ್ತ ಹಾಗೂ ಇಷ್ಟ ಆಗುವ ಚಿತ್ರಗಳಿಗೆ ಮಾತ್ರ ಸಮ್ಮತಿ ಸೂಚಿಸುತ್ತಿದ್ದಾರೆ.
ಮದ್ವೆ ಆದ್ಮೇಲೆ ನಟಿಯರು ಮಹಿಳಾ ಪ್ರಧಾನ ಕಥೆಗಳ ಕಡೆ ಆಸಕ್ತಿ ತೋರುವುದು ಸಾಮಾನ್ಯ. ಕಾಜಲ್ ಸಹ ಇದೇ ಮಾರ್ಗದಲ್ಲಿ ಹೆಜ್ಜೆಯಿಟ್ಟಿದ್ದಾರೆ. ಹಿಂದಿಯಲ್ಲಿ ಹೊಸ ಚಿತ್ರ ಕೈಗೆತ್ತಿಕೊಂಡಿರುವ ಕಾಜಲ್ ಭಾರಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
'ಪತಿ ಹೇಳಿದ್ರೆ ನಟನೆ ಬಿಡ್ತೀನಿ' ಎಂದ ಕಾಜಲ್ ಹೊಸ ಚಿತ್ರಕ್ಕೆ ಸಹಿ
ಕಾಜಲ್ ಮಹಿಳಾ ಪ್ರಧಾನ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಆ ಸಿನಿಮಾಗೆ 'ಉಮಾ' ಎಂದು ಹೆಸರಿಡಲಾಗಿದೆ. ಈ ಪ್ರಾಜೆಕ್ಟ್ಗಾಗಿ ಮಗಧೀರ ನಟಿ 2 ಕೋಟಿ ಸಂಭಾವನೆಯ ಚೆಕ್ ಪಡೆದಿದ್ದಾರೆ ಎನ್ನುವ ಮಾತಿದೆ.