ಬಿಗ್ ಬಾಸ್ 8 ಮುಂದುವರಿದ ಭಾಗ ಆರಂಭಕ್ಕೆ ಮುಹೂರ್ತ ಫಿಕ್ಸ್

ಸೋಮವಾರ, 21 ಜೂನ್ 2021 (10:12 IST)
ಬೆಂಗಳೂರು: ಲಾಕ್ ಡೌನ್ ಬಳಿಕ ಬಿಗ್ ಬಾಸ್ ಕನ್ನಡ 8 ನೇ ಆವೃತ್ತಿಯ ಮುಂದುವರಿದ ಭಾಗ ಆರಂಭವಾಗುತ್ತಿದೆ. ಇದೇ ಬುಧವಾರದಿಂದ ಸಂಜೆ 6 ರಿಂದ ಹೊಸ ಸಂಚಿಕೆಯ ಪ್ರಸಾರ ಆರಂಭವಾಗಲಿದೆ.


ಬಿಗ್ ಬಾಸ್ ಅರ್ಧಕ್ಕೇ ನಿಲ್ಲುತ್ತಿದೆ ಎಂದಾಗ ಸ್ಪರ್ಧಿಗಳು ತೀವ್ರ ನಿರಾಸೆಯಾಗಿದ್ದರು. ಇದೀಗ ಮತ್ತೆ ಅದೇ ಸ್ಪರ್ಧಿಗಳು ಮರಳಿ ದೊಡ್ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಮೊದಲ ಮಹಾಸಂಚಿಕೆ ಬುಧವಾರ ಪ್ರಸಾರವಾಗಲಿದೆ.

ಬಿಗ್ ಬಾಸ್ ಕೊನೆಯ ಸಂಚಿಕೆಗಳಲ್ಲಿ ಕೊರೋನಾದಿಂದಾಗಿ ಕಿಚ್ಚ ಸುದೀಪ್ ಕೂಡಾ ಭಾಗವಹಿಸಿರಲಿಲ್ಲ. ಈಗ ಸುದೀಪ್ ಕೂಡಾ ಶೋಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ