ಮಗಳು ಅಕ್ಷರಾ ಬೌದ್ಧ ಧರ್ಮ ಸ್ವೀಕಾರಕ್ಕೆ ತಂದೆ ಪ್ರತಿಕ್ರಿಯೆಯೇನು..?

ಶನಿವಾರ, 29 ಜುಲೈ 2017 (06:59 IST)
ಚೆನ್ನೈ: ಅಕ್ಷರ ಹಾಸನ್ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವುದು ಗೊತ್ತಿರುವ ವಿಚಾರ. ಆದರೆ ಅಕ್ಷರಾ ಅವರ ಈ ದಿಢೀರ್ ನಿರ್ಧಾರಕ್ಕೆ ತಂದೆ ಕಮಲ್ ಹಾಸನ್ ಅವರ ಪ್ರತಿಕ್ರಿಯೆ ಏನಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಈ ಕುತೂಹಲಕ್ಕೆ ತೆರೆ ಎಳೆದಿದೆ ಅಪ್ಪ-ಮಗಳ ಟ್ವಿಟರ್ ಸಂಭಾಷಣೆ.
 
ಮಗಳಿಗೆ ಟ್ವೀಟ್ ಮಾಡಿರುವ ಕಮಲ್, ಹಾಯ್ ಅಕ್ಷು, ನೀನು ಧರ್ಮವನ್ನು ಬದಲಾಯಿಸಿದ್ದೀಯಾ? ಹಾಗೆ ಮಾಡಿದರೂ ನಾನು ನಿನ್ನನ್ನು ಪ್ರೀತಿಸುತ್ತೇನೆ. ನನ್ನ ಪ್ರೀತಿಗೆ ಯಾವುದೇ ನಿಬಂಧನೆಗಳಿಲ್ಲ. ನಿನ್ನ ಬದುಕನ್ನು ನೀನು ಎಂಜಾಯ್ ಮಾಡು ಎಂಬ ಸಂದೇಶ ರವಾನಿಸಿದ್ದಾರೆ.
 
ಇದಕ್ಕೆ ಪ್ರತಿಕ್ರಿಯಿಸಿರುವ ಅಕ್ಷರಾ, ನಾನು ನಾಸ್ತಿಕಳಾಗಿದ್ದರೂ ಬೌದ್ಧ ಧರ್ಮ ನಂಬುತ್ತೇನೆ. ಅದು ಜೀವನದ ದಾರಿ ಎಂದು ಬರೆದಿದ್ದಾರೆ. ಅಪ್ಪ-ಮಗಳ ಈ ಸಂಭಾಷಣೆ ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದಿದೆ.
 

ವೆಬ್ದುನಿಯಾವನ್ನು ಓದಿ