ಸು ಫ್ರಮ್ ಸೋ ಸಿನಿಮಾ ಕೊನೆಗೂ ಮಾಡಿತು ಆ ದಾಖಲೆ

Krishnaveni K

ಗುರುವಾರ, 7 ಆಗಸ್ಟ್ 2025 (10:03 IST)
ಬೆಂಗಳೂರು: ರಾಜ್ ಬಿ ಶೆಟ್ಟಿ ನಿರ್ಮಾಣದ, ಜೆಪಿ ತುಮಿನಾಡ್ ನಿರ್ದೇಶಿಸಿ ನಟಿಸಿದ ಸು ಫ್ರಮ್ ಸೋ ಸಿನಿಮಾ ರಾಜ್ಯಾದ್ಯಂತ ಮೂರನೇ ವಾರವೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಈಗ ಹೊಸ ದಾಖಲೆ ಮಾಡಿದೆ.

ಸು ಫ್ರಮ್ ಸೋ ಸ್ಟಾರ್ ಗಳಿಲ್ಲದೇ, ಹೆಚ್ಚು ಪ್ರಚಾರದ ಅಬ್ಬರವಿಲ್ಲದೇ ಬಿಡುಗಡೆಯಾದ ಸಿನಿಮಾ. ಆದರೆ ಸಿನಿಮಾ ಬಿಡುಗಡೆಯಾಗಿ ಎರಡನೇ ದಿನಕ್ಕೇ ಬಾಯ್ಮಾತಿನ ಪ್ರಚಾರದಿಂದ ಜನರನ್ನು ಥಿಯೇಟರ್ ಗೆ ಸೆಳೆದಿತ್ತು. ಇದರೊಂದಿಗೆ ಸೋತಿದ್ದ ಸ್ಯಾಂಡಲ್ ವುಡ್ ಗೆ ಮರು ಜೀವ ನೀಡಿತ್ತು.

ಈ ಸಿನಿಮಾ ತಯಾರಾಗಿದ್ದು ಕೇವಲ 5 ಕೋಟಿ ಬಜೆಟ್ ನಲ್ಲಿ. ಆದರೆ ಅದರ ಗಳಿಕೆ ಈಗ 50 ಕೋಟಿ ರೂ. ಕ್ಲಬ್ ಗೆ ಸೇರ್ಪಡೆಯಾಗಿದೆ. ಮೂಲಗಳ ಪ್ರಕಾರ ಸಿನಿಮಾ 55 ಕೋಟಿ ರೂ. ಗಳಿಕೆ ಮಾಡಿದೆ. ಈ ಮೂಲಕ ಕಡಿಮೆ ಬಜೆಟ್ ನಲ್ಲಿ ಅತ್ಯಧಿಕ ಗಳಿಕೆ ಮಾಡಿದೆ.

 ಸು ಫ್ರಮ್ ಸೋ ಬಿಡುಗಡೆಯಾದ ಬಳಿಕ ಕಳೆದ ಎರಡೂ ವೀಕೆಂಡ್ ಗಳಲ್ಲಿ ಜನ ಟಿಕೆಟ್ ಸಿಗದೇ ಪರದಾಡಿದ್ದರು. ಬಹುತೇಕ ಶೋಗಳು ಹೌಸ್ ಫುಲ್ ಆಗಿದ್ದವು. ಸಿನಿಮಾ ಈಗಾಗಲೇ ಮಲಯಾಳಂನಲ್ಲಿ ಬಿಡುಗಡೆಯಾಗಿದ್ದು ತೆಲುಗಿನಲ್ಲೂ ರಿಲೀಸ್ ಆಗುತ್ತಿದೆ. ಈ ಒಂದು ಸಣ್ಣ ಬಜೆಟ್ ಸಿನಿಮಾ ಎಷ್ಟೋ ಕಲಾವಿದರ, ತಂತ್ರಜ್ಞರ ಜೊತೆಗೆ ಚಿತ್ರರಂಗದ ಜೇಬು ತುಂಬಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ