ಸುಪ್ರೀಂ ಆದೇಶದ ಆತಂಕದ ಬೆನ್ನಲ್ಲೇ ನಾಡದೇವಿಯ ಮೊರೆ ಹೋದ ದರ್ಶನ್‌ ತೂಗುದೀಪ್‌

Sampriya

ಬುಧವಾರ, 6 ಆಗಸ್ಟ್ 2025 (18:57 IST)
ಬೆಂಗಳೂರು: ಸುಪ್ರೀಂಕೋರ್ಟ್‌ನಿಂದ ಮಹತ್ವದ ತೀರ್ಪು ಹೊರಬೀರಲಿರುವ ಬೆನ್ನಲ್ಲೇ ನಟ ದರ್ಶನ್ ಅವರು ಬುಧವಾರ ಸಂಜೆ ದಿಢೀರ್ ಆಗಿ ನಾಡದೇವಿ ಚಾಮುಂಡಿ ದರ್ಶನ್ ಪಡೆದು ವಿಶೇಷ ‍ಪೂಜೆ ಸಲ್ಲಿಸಿದ್ದಾರೆ. 

ಈ ಹಿಂದೆ ಆಷಾಢ ಶುಕ್ರವಾರಕ್ಕೆ ಕುಟುಂಬದ ಜೊತೆ ಆಗಮಿಸಿದ್ದ ದರ್ಶನ್ ಇದೀಗ ಏಕಾಂಗಿಯಾಗಿ ಆಗಮಿಸಿ ತಾಯಿ ಚಾಮುಂಡಿ ದರ್ಶನ ಪಡೆದಿದ್ದಾರೆ. ಸುಪ್ರೀಂ ತೀರ್ಪು ಆದೇಶದ ಆತಂಕದ ಹಿನ್ನೆಲೇ ಅವರು ಚಾಮುಂಡಿ ದೇವಿಯ ದರ್ಶನ ಪಡೆದಿದ್ದಾರೆ ಎಂಬ ಚರ್ಚೆಯಾಗುತ್ತಿದೆ. 

ಿನ್ನೂ ಥೈಲ್ಯಾಂಡ್‌ನಲ್ಲಿ ಡೆವಿಲ್ ಶೂಟಿಂಗ್ ಮುಗಿಸಿ ಈಚೆಗೆ ವಾಪಾಸ್ಸಾಗಿದ್ದ ದರ್ಶನ್ ಅವರು ಅದರ ಬೆನ್ನಲ್ಲೇ ಪತ್ನಿ ವಿಜಯಲಕ್ಷ್ಮಿ ಜತೆ ಅಸ್ಸಾಂನ ಗುವಾಹಟಿಯ ಕಾಮಾಕ್ಯದೇವಿ ದರ್ಶನ ಮಾಡಿ ಬಂದಿದ್ದರು. 

ಸಾಮಾನ್ಯವಾಗಿ ದರ್ಶನ್ ಆಷಾಢ ಮಾಸದ ಶುಕ್ರವಾರ ಹಾಗೂ ಮೈಸೂರಿನಲ್ಲಿ ಚಿತ್ರೀಕರಣ ಹೊರತಾಗಿ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಡೋದಿಲ್ಲ. ಆದರೀಗ ಶ್ರಾವಣ ಮಾಸದ ಬುಧವಾರ ದಿಢೀರ್ ಚಾಮುಂಡಮ್ಮನ ಆಶೀರ್ವಾದ ಬೇಡಿರುವುದು ವಿಶೇಷ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ