ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ನೆಟ್ ಫ್ಲಿಕ್ಸ್ ಹಿಂದೂ ಹೆಸರುಗಳ ಬದಲು ನಿಜವಾದ ಅಪಹರಣಕಾರರ ಹೆಸರು ಬಳಸಲು ಮುಂದಾಗಿದೆ. ಸೋಷಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. 1999 ರಲ್ಲಿ ನಡೆದಿದ್ದ ವಿಮಾನ ಅಪಹರಣದಲ್ಲಿ ತಾಲಿಬಾನ್ ಉಗ್ರರಾದ ಇಬ್ರಾಹಿಂ ಅಖ್ತರ, ಶಾಹಿದ್್ ಅಖ್ತರ್ ಸೈದ್, ಸನ್ನಿ ಅಹ್ಮದ್ ಖಾಜಿ, ಜಹೂರ್ ಮಿಸ್ತೀ, ಮತ್ತು ಶಾಖೀರ್ ಭಾಗಿಯಾಗಿದ್ದರು.
ಆದರೆ ಸಿನಿಮಾದಲ್ಲಿ ಈ ಹೆಸರುಗಳ ಬದಲು ಹಿಂದೂ ಹೆಸರುಗಳಾದ ಭೋಲಾ, ಶಂಕರ್, ಡಾಕ್ಟರ್, ಬರ್ಗರ್, ಚೀಫ್ ಎಂದು ಇಡಲಾಗಿದೆ. ಒಂದೇ ಒಂದು ಮುಸ್ಲಿಂ ಹೆಸರಿಲ್ಲ. ನಿಜವಾದ ಭಯೋತ್ಪಾದಕರ ಹೆಸರು ಮರೆಮಾಚಿ ಹಿಂದೂ ಹೆಸರುಗಳನ್ನು ಬಳಕೆ ಮಾಡುವುದರ ಉದ್ದೇಶವೇನು ಎಂದು ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಹೆಸರುಗಳನ್ನು ಬದಲಾಯಿಸಿರುವುದಾಗಿ ನೆಟ್ ಫ್ಲಿಕ್ ಸ್ಪಷ್ಟನೆ ನೀಡಿದ್ದಾರೆ.