ಸಾಕಷ್ಟು ಬಾರಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ಪ್ರತ್ಯೇಕವಾಗಿಯೇ ಕಾಣಿಸಿಕೊಂಡಿದ್ದಾರೆ. ಅಂಬಾನಿ ಮದುವೆಯಿಂದ ಹಿಡಿದು ವಿಮಾನ ನಿಲ್ದಾಣದಲ್ಲೂ ಅಭಿಷೇಕ್ ತಮ್ಮ ತಂದೆ-ತಾಯಿ, ಸಹೋದರಿ ಜೊತೆ ಓಡಾಡುತ್ತಿದ್ದರೆ, ಐಶ್ವರ್ಯಾ ತಮ್ಮ ಮಗಳ ಜೊತೆ ಓಡಾಡುತ್ತಿರುವುದು ಗಮನಕ್ಕೆ ಬಂದಿದೆ.
ಇಬ್ಬರೂ ದೂರ ದೂರವಿರುವುದನ್ನು ನೋಡಿ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂದು ಎಲ್ಲರಿಗೂ ಅನಿಸಿತ್ತು. ಆದರೆ ಈಗ ದುಬೈನಲ್ಲಿ ಐಶ್ವರ್ಯಾ, ಅಭಿಷೇಕ್ ತಮ್ಮ ಮಗಳು ಆರಾಧ್ಯ ಜೊತೆ ಒಟ್ಟಿಗೇ ಸುತ್ತಾಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನು ನೋಡಿದರೆ ಇಬ್ಬರ ನಡುವಿನ ಮನಿಸು ಮರೆಯಾಗಿ ಪ್ಯಾಚ್ ಅಪ್ ಮಾಡಿಕೊಂಡಿದ್ದಾರೇನೋ ಅನಿಸುತ್ತಿದೆ. ಆದರೆ ಇದು ಹಳೆಯ ವಿಡಿಯೋ ಎಂಬ ಅನುಮಾನವೂ ಇದೆ. ಅದೇನೇ ಇದ್ದರೂ ಇಬ್ಬರೂ ಒಟ್ಟಿಗೇ ಇರುವ ಫೋಟೋ, ವಿಡಿಯೋ ನೋಡಿ ಅಭಿಮಾನಿಗಳಂತೂ ಖುಷಿಯಾಗಿದ್ದಾರೆ.