ಕಾಲ್ ಡ್ರಾಪ್ ರೆಕಾರ್ಡ್ ನಲ್ಲಿ ಕಂಗನಾ ಹೆಸರು; ಪೊಲೀಸ್ ಅಧಿಕಾರಿಯ ವಿರುದ್ಧ ಸಿಟ್ಟಿಗೆದ್ದ ಕಂಗನಾ ಸಹೋದರಿ

ಶುಕ್ರವಾರ, 23 ಮಾರ್ಚ್ 2018 (06:15 IST)
ಮುಂಬೈ : ಕಾಲ್ ಡ್ರಾಪ್ ರೆಕಾರ್ಡ್ (ಸಿಡಿಆರ್) ಕೇಸ್ ನಲ್ಲಿ ಇತ್ತಿಚೆಗೆ ಬಾಲಿವುಡ್ ತಾರೆಯರ ಹೆಸರು ಕೇಳಿಬರುತ್ತಿದ್ದು, ಇದೀಗ ಬಾಲಿವುಡ್ ನ ಇನ್ನೊಬ್ಬ ನಟಿಯ ಹೆಸರು ಕೇಳಿಬಂದಿದೆ.


ಇತ್ತಿಚೆಗೆ ಕಾಲ್ ಡ್ರಾಪ್ ರೆಕಾರ್ಡ್ (ಸಿಡಿಆರ್) ಕೇಸ್ ನ ವಿಚಾರಣೆ ವೇಳೆ  ಬಾಲಿವುಡ್ ನಟ ನವಾಜ್ ಸಿದ್ದಿಕಿ ಅವರು ಅವರ ಪತ್ನಿಯ ಕಾಲ್ ಡಿಟೆಲ್ಸ್ ಪಡೆದಿರುವ ಮಾಹಿತಿ ತಿಳಿದುಬಂದಿತ್ತು. ಆದರೆ ಈಗ ಬಾಲಿವುಡ್ ನಟಿ ಕಂಗನಾ ರಾಣಾವತ್ ಹೆಸರು ಕೇಳಿಬರುತ್ತಿದೆ. ಜೊತೆಗೆ ಬಾಲಿವುಡ್ ನಟ ಜಾಕಿ ಶ್ರಾಫ್ ಅವರ ಪತ್ನಿ ಆಯೇಶಾ ಹೆಸರು ಕೂಡ ಕೇಳಿಬಂದಿದೆ.


ತನಿಖೆಯ ವೇಳೆ ಕಂಗನಾ ರಾಣಾವತ್ ಅವರು ಹೃತಿಕ್ ರೋಶನ ಅವರ ಮೊಬೈಲ್ ನಂಬರನ್ನು ಆರೋಪಿ ರಿಜ್ವಾನ್ ಸಿದ್ದಿಕಿ ಜತೆಗೆ 2016ರಲ್ಲಿ ಶೇರ್ ಮಾಡಿರುವುದು ಗೊತ್ತಾಗಿದೆ. ಆದರೆ ಇದಕ್ಕೆ ಕಾರಣವೇನೆಂಬುದು ಗೊತ್ತಾಗಿಲ್ಲ ಎಂದು ಡಿಸಿಪಿ ಹೇಳಿದ್ದಾರೆ. ಆದರೆ ಈ ಕೇಸಿನಲ್ಲಿ ತನ್ನ ಸಹೋದರಿಯಾಗಿರುವ ನಟಿ ಕಂಗನಾ ರಾಣಾವತ್ ಹೆಸರನ್ನು ಉಲ್ಲೇಖೀಸಿರುವ ಪೊಲೀಸ್ ಅಧಿಕಾರಿ ವಿರುದ್ಧ ರಂಗೋಲಿ ಚಾಂದೇಲ್ ಹರಿಹಾಯ್ದಿದ್ದಾರೆ.


ಹಾಗೇ ಆಯೇಶಾ ಶ್ರಾಫ್ ಅವರು ಕೂಡ ನಟ ಸಾಹಿಲ್ ಖಾನ್ ಅವರ ಕಾಲ್ ಡಿಟೇಲ್ಸ್ ಗಳನ್ನು ರಿಜ್ವಾನ್ ಸಿದ್ದಿಕಿಯೊಂದಿಗೆ ಹಂಚಿಕೊಂಡಿರುವುದನ್ನು ಪತ್ತೆ ಹಚ್ಚಲಾಯಿತು ಎಂಬುದಾಗಿ ಥಾಣು ಪೊಲೀಸ್ ಕ್ರೈಮ್ ಬ್ರಾಂಚ್ ಡಿಸಿಪಿ ಅಭಿಷೇಕ್ ತ್ರಿಮುಖೆ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ