ನಾನು ಸಣ್ಣ ನಗರದಿಂದ ಬಂದವಳು.. ದೊಡ್ಡ ಕನಸುಗಳು ನನ್ನಲಿವೆ, ಕನಸುಗಳನ್ನು ಸಾಕಾರಗೊಳಿಸಲು ನಾನು ಧೈರ್ಯ, ಧೃಡ ನಿರ್ಧಾರಗಳನ್ನು ಹೊಂದಿದ್ದಾನೆ. ಹೀಗಂತ ಹೇಳಿದ್ದಾಳೆ ಬಾಲಿವುಡ್ ಕ್ವೀನ್ ಕಂಗನಾ ರಣಾವತ್...
ರೀಬಾಕ್ ಇಂಡಿಯಾದ ಅಂಬಾಸಿಡರ್ ಆಗಿರೋ ಕಂಗನಾ ಕ್ಯಾಪೇನ್‌ಗಾಗಿ ವಿಡಿಯೋ ಶೂಟ್ ಮಾಡಿದ್ದಾರೆ... ಈ ವಿಡಿಯೋದಲ್ಲಿ ಮಹಿಳೆಯರನ್ನು ಆಹ್ವಾನಿಸಿದ್ದಾರೆ ಕಂಗನಾ. ಕಂಗನಾ ಈ ವಿಡಿಯೋದಲ್ಲಿ ಮಹಿಳೆಯ ಇತಿಹಾಸ, ಧೈರ್ಯ, ಸಾಧನೆ ಹಾಗೂ ಪ್ರೋತ್ಸಾಹದ ಕುರಿತು ಬಿಂಬಿಸಲಾಗಿದೆ.
ಈ ಬಗ್ಗೆ ಮಾತನಾಡಿರೋ ಕಂಗನಾ, ರೀಬಾಕ್ ಇಂಡಿಯಾದ ಅಂಬಾಸಿಡರ್ ಆಗಿದ್ದೇನೆ. ಈ ಮೂಲಕ ನಾನು ಮಹಿಳೆಯರ ಸ್ಥೈರ್ಯವನ್ನು ಬೆಂಬಿಸಲು ಮುಮದಾಗಿದ್ದೇನೆ ಎಂದಿರುವ ಅವರು, ಅಲ್ಲದೇ ಮಿಲಿಯನ್ ಮಹಿಳೆಯರು ತಮ್ಮ ಸ್ಟೋರಿಗಳನ್ನು ಶೇರ್ ಮಾಡಿಕೊಳ್ಳಬಹುದು..
'ನಾನು ಸಣ್ಣ ನಗರದಿಂದ ಬಂದವಳು... ನಾನೊಬ್ಬಳೇ ಅಲ್ಲ ಹಲವರು ತಮ್ಮ ಲೈಫ್‌ನಲ್ಲಿ ಹಲವು ಅಡೆತಡೆಗಳನ್ನು ಎದುರಿಸಿ ಮುಂದೆ ಬಂದಿದ್ದಾರೆ'. ಮಹಿಳೆಯರು ದೈಹಿಕವಾಗಿ, ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಸಬಲರಾಗಿರಬೇಕು ಎಂಬುವುದರಲ್ಲಿ ನಾನು ನಂಬುತ್ತೇನೆ. ಆದ್ದರಿಂದ ನನ್ನ ಸ್ಟೋರಿ ನಿಮಗೆ ಸ್ಪೂರ್ತಿ ನೀಡಲಿದೆ ಎಂದು ಭಾವಿಸಿದ್ದೇನೆ ಎಂದು ಕಂಗನಾ ತಿಳಿಸಿದ್ದಾರೆ.