ಮನದಾಳವನ್ನು ಬಿಚ್ಚಿಟ್ಟ ಹಾಟ್ ನಟಿ ಕಂಗನಾ ರನಾವತ್

ಬುಧವಾರ, 13 ಡಿಸೆಂಬರ್ 2023 (12:47 IST)
ಈಗಾಗಲೇ ಬಾಲಿವುಡ್ ಅಂಗಳದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಮನೆ ಮಾತಾಗಿರುವ ನಟಿ ಕಂಗನಾ ರನೌತ್. ಸದ್ಯ  ತೇಜಸ್ ಸಿನಿಮಾ ಬಳಿಕ ಕಂಗನಾ ಮುಂದಿನ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರ ನಡುವೆಯೇ ಕಂಗನಾಗೆ ಶೇಖರ್ ಕಪೂರ್ ಅವರ ಸಿನಿಮಾದಲ್ಲಿ ನಟಿಸೋದಕ್ಕೆ ಆಫರ್ ಬಂದಿದೆಯಂತೆ.
 
ಅಂದ್ಹಾಗೆ ಕಂಗನಾಗೆ ಆಫರ್ ಬಂದಿರೋದು ನಾಯಕಿಯಾಗಿ ಪಾತ್ರಕ್ಕಾದ್ರೂ ಕಂಗನಾ ಆ ಸಿನಿಮಾದಲ್ಲಿ 85 ವರ್ಷದ ಮುದುಕಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ.ಈ ಬಗ್ಗೆ ನಾನು ಈಗಾಗಲೇ ಶೇಖರ್ ಅವರ ಜೊತೆ ಮಾತುಕತೆ ನಡೆಸಿದ್ದೇನೆ ಎಂದಿರುವ ಕಂಗನಾ, ಇದೊಂದು ಸವಾಲಿನ ಪಾತ್ರ. ಆದ್ರೂ ನನಗೆ ಇಂತಹ ಪಾತ್ರವನ್ನು ಮಾಡಬೇಕೆಂಬ ಆಸೆ ಬಹು ದಿನಗಳಿಂದಾನೇ ಇದೆ ಅಂತಾ ಕಂಗನಾ ಹೇಳಿದ್ದಾರೆ.
 
ಆದ್ರೆ ಶೇಖರ್ ಮಾತ್ರ ನಾನು ಈ ಪಾತ್ರಕ್ಕಾಗಿ ಕಂಗನಾ ಅವರಿಗೆ ಆಫರ್ ಮಾಡಿಲ್ಲ ಎಂದಿದ್ದಾರೆ. ಆದ್ರೆ ಕಂಗನಾ ಮಾತ್ರ ನಾನು ಇಂತಹ ಪಾತ್ರಗಳನ್ನು ಮಾಡೋದಕ್ಕಾಗಿ ಎದುರು ನೋಡುತ್ತಿದ್ದೇನೆ.ಆದ್ರೆ ಹೆಚ್ಚಿನವರು ಇಂತಹ ಪಾತ್ರಗಳನ್ನು ನಿರ್ವಹಿಸೋದಕ್ಕೆ ಹಿಂಜರಿಯುತ್ತಾರೆ. ಅದು ಯಾಕೆ ಅಂತಾ ನನಗೆ ಗೊತ್ತಿಲ್ಲ ಎಂದಿದ್ದಾರೆ ಕಂಗನಾ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ