ಸೋನಿಯಾ ಗಾಂಧಿ, ಕಾಂಗ್ರೆಸ್ ವಿರುದ್ಧ ನಟಿ ಕಂಗನಾ ರನಾವತ್ ವಾಗ್ದಾಳಿ

ಮಂಗಳವಾರ, 30 ಏಪ್ರಿಲ್ 2019 (07:57 IST)
ಮುಂಬೈ: ಬಾಲಿವುಡ್ ನಟಿ ಕಂಗನಾ ರನಾವತ್ ತಮ್ಮ ಬಿಚ್ಚು ನುಡಿಗಳಿಂದಲೇ ಖ್ಯಾತರಾದವರು. ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವ ಕಂಗನಾ ಇದೀಗ ಕಾಂಗ್ರೆಸ್ ಪಕ್ಷ ಮತ್ತು ನಾಯಕಿ ಸೋನಿಯಾ ಗಾಂಧಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.


ನಿನ್ನೆ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದ ಕಂಗನಾ ನಾವು ಹಿಂದೆ ಇಟೆಲಿ ಸರ್ಕಾರದ ಸೇವಕರಾಗಿದ್ದೆವು. ಅಬ್ಬಾ.. ಈವತ್ತು ನಾವು ಸ್ವತಂತ್ರರಾಗಿದ್ದೇವೆ ಎಂದಿದ್ದಾರೆ.

‘ನಿಜ ಹೇಳಬೇಕೆಂದರೆ ಭಾರತ ಇತ್ತೀಚೆಗಷ್ಟೇ ಸ್ವಂತತ್ರವಾಗಿದೆ. ಇದಕ್ಕೆ ಮೊದಲು ಮುಘಲರು, ಬ್ರಿಟಿಷ್, ಇಟೆಲಿ ಸರ್ಕಾರದ ದಾಸ್ಯದಲ್ಲಿತ್ತು. ಈಗ ನಿಜವಾದ ಅರ್ಥದಲ್ಲಿ ಸ್ವತಂತ್ರವಾಗಿದೆ’ ಎಂದಿದ್ದಾರೆ. ಆ ಮೂಲಕ ಕಾಂಗ್ರೆಸ್ ಮತ್ತು ಸೋನಿಯಾ ಗಾಂಧಿಯವರ ಇಟೆಲಿ ಮೂಲವನ್ನು ಕೆದಕಿ ಟಾಂಗ್ ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ