ಕನ್ನಡದ ನಟರು ಪರಭಾಷಾ ಸಿನಿಮಾಗಳಲ್ಲಿ ಅಭಿನಯಿಸೋದು ಹಾಗೇ ಪರಭಾಷೆಯ ಖ್ಯಾತ ತಾರೆಯರು ಕನ್ನಡ ಸಿನಿಮಾದಲ್ಲಿ ಅಭಿನಯಿಸೋದು, ಹಾಗೇ ಪರಭಾಷಾ ತಂತ್ರಜ್ಞರು ಕನ್ನಡ ಸಿನಿಮಾದಲ್ಲಿ ಕೆಲಸ ಮಾಡೋದು ಹೊಸ ವಿಚಾರವೇನಲ್ಲ.ಅದಕ್ಕೆ ನಮ್ಮಲ್ಲಿ ಸಾಕಷ್ಟು ಉದಾಹರಣೆಗಳಿವೆ. ಇದೀಗ ದಕ್ಷಿಣ ಭಾರತದ ಖ್ಯಾತ ತಂತ್ರಜ್ಞರೊಬ್ಬರು ಕನ್ನಡಕ್ಕೆ ಬರೋದಕ್ಕೆ ರೆಡಿಯಾಗಿದ್ದಾರೆ.
ಅಪೂರ್ವ ಅವರು ಇದೇ ಮೊದಲ ಬಾರಿಗೆ ನಿರುತ್ತರ ಅನ್ನೋ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾ.ಸಿನಿಮಾದಲ್ಲಿ ರಾಹುಲ್ ಬೋಸ್ ಹಾಗೂ ಭಾವನಾ ಅವರು ಅಭಿನಯಿಸುತ್ತಿದ್ದಾರೆ.ಜೊತೆಗೆ ಐಂದ್ರಿತಾ ಹಾಗೂ ಕಿರಣ್ ಶ್ರೀನಿವಾಸ್ ಕೂಡ ಅಭಿನಯಿಸುತ್ತಿದ್ದಾರೆ. ಈ ಸಿನಮಾದಲ್ಲಿ ರಸೆಲ್ ಅವರು ಅಪೂರ್ವ ಕಾಸರವಳ್ಳಿ ಅವರ ಜೊತೆ ಕೆಲಸ ಮಾಡಲಿದ್ದಾರೆ.