ಕರಣ್- ಬಿಪಾಶಾ ಬಸು ಅವರಲ್ಲಿ ಕ್ಷಮೆಯಾಚಿಸಿದ ಯುವರಾಜ್ ಸಿಂಗ್

ಗುರುವಾರ, 5 ಮೇ 2016 (15:54 IST)
ಮೊನ್ನೆಯಷ್ಟೇ ಬಾಲಿವುಡ್ ನ ಹಾಟ್ ಜೋಡಿ ಕರಣ್ ಸಿಂಗ್ ಗ್ರೋವರ್ ಹಾಗೂ ಬಿಪಾಶಾ ಬು ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಾಲಿವುಡ್ ನ ಈ ಜೋಡಿ ಹಕ್ಕಿಗಳ ವಿವಾಹಕ್ಕೆ ಅನೇಕ ಬಾಲಿವುಡ್ ತಾರೆಯರು ಸಾಕ್ಷಿಯಾಗಿದ್. ಹೀಗಿರುವಾಗಲೇ ಕ್ರಿಕೆಟಿಗ ಸಿಕ್ಕರ್ ಸಿಂಗ್ ಯುವರಾಜ್ ಸಿಂಗ್ ಅವರು ಇಬ್ಬರ ಕ್ಷಮೆಯಾಚಿಸಿದ್ದಾರೆ.
ಅರೇ! ಯುವರಾಜ್ ಸಿಂಗ್ ಅವರು ಕರಣ್ ಹಾಗೂ ಬಿಪಾಶಾ ಅವರಲ್ಲಿ ಕ್ಷಮೆಯಾಚಿಸುವಂತಹ ತಪ್ಪು ಏನ್ ಮಾಡಿದ್ರಪ್ಪ ಅಂತಾ ನೀವು ಯೋಚನ ಮಾಡುತ್ತಿದ್ದೀರಾ. ಅಂದ್ಹಾಗೆ ಆಗಿದ್ದು ಇಷ್ಟೇ. ಮೊನ್ನೆ ನಡೆದ ಬಿಪಾಶಾ ಹಾಗೂ ಕರಣ್ ಗ್ರವರ್ ಅವರ ವಿವಾಹಕ್ಕೆ ಹಾಗೇ ಆರತಕ್ಷತೆ ಎರಡೂ ಕಾರ್ಯಕ್ರಮಗಳಿಗೂ ಕೂಡ ಕ್ರಿಕೆಟಿಗ ಯುವರಾಜ್ ಸಿಂಗ್ ಮಾತ್ರ ಆಗಮಿಸಿರಲಿಲ್ಲ.
 
ಹಾಗಾಗಿ ವಿವಾಹಕ್ಕೆ ಬಾರದೇ ಇರೋದಕ್ಕೆ ಯುವಿ ಕ್ಷಮೆಯಾಚಿಸಿದ್ದಾರೆ.ಸದ್ಯ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದಾರಾಬಾದ್ ಪರ ಆಡುತ್ತಿರುವ ಯುವಿ ಬ್ಯುಸಿಯಾಗಿದ್ದದ್ದರಿಂದ ನನಗೆ ವಿವಾಹಕ್ಕೆ ಬರೋದಕ್ಕೆ ಸಾಧ್ಯವಾಗಲಿಲ್ಲ ಅಂದಿದ್ದಾರೆ.
 
ಇನ್ನು ಬಿಪಾಶಾ ಹಾಗೂ ಕರಣ್ ಗ್ರೋವರ್ ಅವರ ವಿವಾಹಕ್ಕೆ ಬಾಲಿವುಡ್ ತಾರೆಯರ ದಂಡೇ ಹರಿದು ಬಂದಿತ್ತು.ಐಶ್ವರ್ ರೈ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಸಲ್ಮಾನ್ ಖಾನ್, ಶಾರುಖ್ ಖಾನ್ ಹೀಗೆ ಅನೇಕ ದೊಡ್ಡ ದೊಡ್ಡ ಸ್ಟಾರ್ ಗಳು ವಿವಾಹಕ್ಕೆ ಸಾಕ್ಷಿಯಾಗಿದ್ರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ