ಪ್ರೀತಿಸಿ ಮದುವೆಯಾದ ಗಾಯಕಿ ಪೃಥ್ವಿ- ಅಭಿಷೇಕ್‌ ಜೋಡಿಯ ಅದ್ಧೂರಿ ಆರತಕ್ಷತೆಗೆ ಸೆಲೆಬ್ರೆಟಿಗಳ ಸಾಥ್‌

Sampriya

ಶನಿವಾರ, 17 ಮೇ 2025 (14:16 IST)
Photo Courtesy X
ಬೆಂಗಳೂರು: ಪೋಷಕರ ವಿರೋಧದ ನಡುವೆಯೂ ಪ್ರಿಯಕರನನ್ನು ವರಸಿದ್ದ ಸರಿಗಮಪ ಖ್ಯಾತಿಯ ಗಾಯಕಿ ಪೃಥ್ವಿ ಭಟ್‌ ಈಗ ಅದ್ದೂರಿಯಾಗಿ ರಿಸೆಪ್ಷನ್‌ ಮಾಡಿಕೊಂಡಿದ್ದಾರೆ.
ಶುಕ್ರವಾರ ಅದ್ದೂರಿಯಾಗಿ ನಡೆದ ಆರತಕ್ಷತೆಯಲ್ಲಿ ಹಲವು ಸೆಲೆಬ್ರೆಟಿಗಳು ಭಾಗವಹಿಸಿ,  ಪೃಥ್ವಿ ಭಟ್‌ ಮತ್ತು ಅಭಿಷೇಕ್‌ ಜೋಡಿಗೆ  ಶುಭಹಾರೈಸಿದ್ದಾರೆ.

ಸರಿಗಮಪ ರಿಯಾಲಿಟಿ ಶೋ ತೀರ್ಪುಗಾರ, ಗಾಯಕ ವಿಜಯ್‌ ಪ್ರಕಾಶ್‌, ನಿರೂಪಕಿ ಅನುಶ್ರೀ, ಬಿಗ್‌ ಬಾಸ್‌ ಖ್ಯಾತಿಯ ಮೋಕ್ಷಿತಾ ಪೈ, ಬಿಗ್‌ಬಾಸ್‌ ಸೀಸನ್‌ 11ರ ವಿನ್ನರ್‌ ಹನುಮಂತ ಲಮಾಣಿ, ಪ್ರಥಮ್‌, ಗಾಯಕ ಸುನೀಲ್‌ ಹಾಗೂ ಸರಿಗಮಪ ಸ್ಪರ್ಧಿಗಳು  ಆರತಕ್ಷತೆಯಲ್ಲಿ ಭಾಗವಹಿಸಿದರು.

ಪೃಥ್ವಿ ಭಟ್‌ ಅವರು ಮಾ.27 ರಂದು ದೇವಾಲಯವೊಂದರಲ್ಲಿ ಅಭಿಷೇಕ್‌ ಎಂಬ ಹುಡುಗನ ಜೊತೆ ವಿವಾಹವಾದರು. ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್‌ ಅವರನ್ನು ಪ್ರೀತಿಸಿ ಗಾಯಕಿ ಮದುವೆಯಾಗಿದ್ದರು.

ಪುತ್ರಿ ಪೃಥ್ವಿ ಮದುವೆಗೆ ತಂದೆ ಶಿವಪ್ರಸಾದ್‌ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಪೃಥ್ವಿ ಭಟ್‌ ವಿಡಿಯೊ ಮಾಡಿ ಕ್ಷಮೆಯಾಚಿಸಿದ್ದರು. ಇದೀಗ ನವದಂಪತಿ ಅದ್ದೂರಿಯಾಗಿ ಆರತಕ್ಷತೆ ಮಾಡಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ