ಮತ್ತೆ ಮದುವೆಯಾಗುತ್ತಾರಾ ಕರೀಷ್ಮಾ ಕಪೂರ್. ಈ ಬಗ್ಗೆ ಕರೀಷ್ಮಾ ತಂದೆ ಹೇಳಿದ್ದೇನು?

ಬುಧವಾರ, 13 ಜೂನ್ 2018 (06:39 IST)
ಮುಂಬೈ : ಪತಿಯಿಂದ ವಿಚ್ಚೇದನ ಪಡೆದ ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಅವರು  ಮುಂಬೈ ಮೂಲದ ಉದ್ಯಮಿ ಸಂದೀಪ್ ತೋಷ್ಸಿ ವಾಲಾ ಅವರನ್ನು ಪ್ರೀತಿಸುತ್ತಿದ್ದಾರೆ, ಮದುವೆ ಕೂಡ ಆಗಲಿದ್ದಾರೆ ಎಂಬ ಸುದ್ದಿ ಎಲ್ಲಾ ಕಡೆ ಹರಿದಾಡಿದ್ದು, ಈ ಸುದ್ದಿ ನಿಜವೋ ಅಥವಾ ಸುಳ್ಳು ಸುದ್ದಿನಾ ಎಂಬುದನ್ನು ಇದೀಗ ಕರೀಷ್ಮಾ ತಂದೆ ರಣಧೀರ್ ಕಪೂರ್ ಅವರು ತಿಳಿಸಿದ್ದಾರೆ.


ಈ ವದಂತಿಯ ಬಗ್ಗೆ ಪ್ರತಿಕ್ರಿಯಿಸಿದ ರಣಧೀರ್ ಕಪೂರ್ ಅವರು,’ಕರಿಷ್ಮಾ ಮದುವೆ ಬಗ್ಗೆ ಕೇಳಿಸುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು. ಮತ್ತೆ ಮದುವೆಯಾಗುವಂತೆ ಕರಿಷ್ಮಾಗೆ ಹೇಳಿದೆ. ಆದರೆ ಬಿಲ್ ಕುಲ್ ಆಗಲ್ಲ ಎಂದು ಹೇಳಿದಳು. ಮದುವೆ ಬಗ್ಗೆ ಆಸಕ್ತಿ ಇಲ್ಲ ಎಂದಳು. ಈ ಬಗ್ಗೆ ನಾವಿಬ್ಬರೂ ಚರ್ಚಿಸಿಕೊಂಡಿದ್ದೇವೆ. ಮಕ್ಕಳೇ ನನ್ನ ಜಗತ್ತೆಂದು ಅವರಿಗೆ ಉತ್ತಮ ಭವಿಷ್ಯ ರೂಪಿಸುವುದೇ ತನ್ನ ಧ್ಯೇಯೋದ್ದೇಶ ಎಂದು ಹೇಳಿದಳು. ಸಂದೀಪ್ ಬಗ್ಗೆ ನನಗೆ ಅಷ್ಟಾಗಿ ಗೊತ್ತಿಲ್ಲ’ ಎಂದು ಹೇಳುವುದರ ಮೂಲಕ ಈ ವಿಚಾರಕ್ಕೆ ತೆರೆ ಎಳೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ