ಸ್ವರಾ ಭಾಸ್ಕರ್ ನಮ್ಮದು ಹಿಪೊಕ್ರಿಸಿ ಸಮಾಜ ಎಂದಿದ್ದು ಯಾಕೆ?

ಮಂಗಳವಾರ, 12 ಜೂನ್ 2018 (12:46 IST)
ಮುಂಬೈ : ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರು 'ನಮ್ಮದು ಹಿಪೊಕ್ರಿಸಿಯಿಂದ ಕೂಡಿದ ಸಮಾಜ’ ಎಂದು ಹೇಳಿದ್ದಾರೆ.


ನಟಿ ಸ್ವರಾ ಭಾಸ್ಕರ್ ಅವರು ಈ ರೀತಿ ಹೇಳಲು ಕಾರಣವಿದೆ. ಅದೇನೆಂದರೆ ಇತ್ತೀಚೆಗಷ್ಟೇ ಬಿಡುಗಡೆಯಾದ 'ವೀರೆ ದಿ ವೆಡ್ಡಿಂಗ್' ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದ್ದರೂ ಕೂಡ ಚಿತ್ರದಲ್ಲಿರುವ  ನಟಿ ಸ್ವರಾ ಭಾಸ್ಕರ್ ಅವರ ಹಸ್ತಮೈಥುನ  ದೃಶ್ಯ ಸಾಕಷ್ಟು ಟ್ರೋಲ್‌ ಗೆ ಗುರಿಯಾಗಿತ್ತು.


ಆದರೆ ಈ ಬಗ್ಗೆ ತಲೆಕೆಡಿಸಿಕೊಳ್ಳದ ನಟಿ ಸ್ವರಾ ಭಾಸ್ಕರ್ ಅವರು, 'ಪಾತ್ರವೊಂದರಲ್ಲಿ ತನ್ಮಯವಾಗಿ ನಟಿಸಿದ ಮೇಲೆ ನಟರು ತಮ್ಮ ಪಾತ್ರಕ್ಕೆ ಬರುವ ಪ್ರತಿಕ್ರಿಯೆಗಳ ಬಗ್ಗೆ ಎಂದಿಗೂ ತಲೆಕೆಡಿಸಿಕೊಳ್ಳಬಾರದು. ಇದರಿಂದ ಅವರು ಪಾತ್ರಕ್ಕೆ ನ್ಯಾಯ ಒದಗಿಸಿದಂತಾಗುವುದಿಲ್ಲ' ಎಂದು ಹೇಳಿದ್ದಾರೆ. ಹಾಗೇ 'ನಮ್ಮದು ಹಿಪೊಕ್ರಿಸಿಯಿಂದ ಕೂಡಿದ ಸಮಾಜ. ಇಲ್ಲಿ ಪುರುಷರು ಏನು ಮಾಡಿದರೂ ನಡೆಯುತ್ತದೆ. ಆದರೆ ಮಹಿಳೆಯರು ಅದೇ ಕೆಲಸವನ್ನು ಮಾಡಿದಾಗ ಟೀಕೆಗಳ ಸುರಿಮಳೆಯೇ ಆಗುತ್ತದೆ. ಇದು ಆರೋಗ್ಯವಂತ ಸಮಾಜದ ಲಕ್ಷಣವಲ್ಲ' ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ