ರೇಣುಕಾಸ್ವಾಮಿ ಕುಟುಂಬದ ಪರಿಸ್ಥಿತಿ ನೋಡಿ ಕಣ್ಣೀರು ಬಂತು: ಫಿಲ್ಮ್‌ ಚೇಂಬರ್‌ ಅಧ್ಯಕ್ಷ ಸುರೇಶ್‌

sampriya

ಶನಿವಾರ, 15 ಜೂನ್ 2024 (17:32 IST)
ಚಿತ್ರದುರ್ಗ: ಇಲ್ಲಿನ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಭಾಗಿಯಾಗಿರುವ ಆರೋಪದ ಹಿನ್ನೆಲೆ ಕರ್ನಾಟಕ ಫಿಲ್ಮ್‌ ಚೇಂಬರ್‌ ಅವರು ಮೃತನ ಕುಟುಂಬವನ್ನು ಭೇಟಿಯಾಗಿ 5 ಲಕ್ಷ ರೂ ಚೆಕ್‌ ಅನ್ನು ಪರಿಹಾರವಾಗಿ ನೀಡಿದರು.

ಚಿತ್ರದುರ್ಗದಲ್ಲಿರುವ ರೇಣುಕಾಸ್ವಾಮಿ ಅವರ ಮನೆಗೆ ಭೇಟಿ ನೀಡಿ ಅವರ ತಂದೆ-ತಾಯಿ, ರೇಣುಕಾಸ್ವಾಮಿ ಪತ್ನಿಗೆ ಫಿಲ್ಮ್​ ಚೇಂಬರ್​ ಅಧ್ಯಕ್ಷರು ಸೇರಿದಂತೆ ಪ್ರಮುಖರು ಸಾಂತ್ವಾನ ಹೇಳಿದರು.

ಇನ್ನೂ ನಟ ದರ್ಶನ್‌ ಅವರ ಮಾಡಿದ್ದಾರೆಂಬ ಆರೋಪ ಎದುರಿಸುತ್ತಿದ್ದು, ಆದ್ದರಿಂದ ಚಿತ್ರರಂಗದ ಪರವಾಗಿ ಕ್ಷಮೆ ಕೇಳುವುದಾಗಿ ಫಿಲ್ಮ್​ ಚೇಂಬರ್​ ಅಧ್ಯಕ್ಷ ಎನ್​.ಎಂ.ಸುರೇಶ್​ ಹೇಳಿದರು. ನಂತರ 5 ಲಕ್ಷ ರೂ. ಚೆಕ್​ ಅನ್ನು ಪರಿಹಾರವಾಗಿ ನೀಡಿ, ಮುಂದೆ ಮತ್ತಷ್ಟು ಸಹಾಯ ಮಾಡುವುದಾಗಿ ಭರವಸೆ ನೀಡಿದರು.

 ನಂತರ ಮಾಧ್ಯಮದ ಜತೆ ಮಾಡಿನಾಡಿದ ಎನ್‌ ಎಂ ಸುರೇಶ್‌ ಅವರು,  ಚಿತ್ರರಂಗದ ಪರವಾಗಿ ಕ್ಷಮೆ ಕೇಳಲು ಬಂದಿದ್ದೇವೆ. ಯಾರೇ ಮಾಡಿದ್ದರೂ ತಪ್ಪು ತಪ್ಪೇ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಇಂತಹ ತಪ್ಪನ್ನು ಖಂಡಿಸುತ್ತದೆ ಎಂದರು.

ರೇಣುಕಾಸ್ವಾಮಿ ಅವರ ತಂದೆ-ತಾಯಿ ಕಣ್ಣೀರು ನೋಡಿದ್ರೆ ನಮಗೂ ಕಣ್ಣೀರು ಬಂತು. ನಾವು ಇಲ್ಲಿಗೆ ಸಂತಾಪ ಹೇಳಲು ಬಂದಿದ್ದೇವೆ ಹೊರತು, ಯಾವುದೇ ರಾಜಿಗಾಗಿ ಅಲ್ಲ. ಇಂದು ಐದು ಲಕ್ಷ ರೂ. ಚೆಕ್​ ಅನ್ನು ಸಾಂಕೇತಿಕವಾಗಿ ಕೊಡಲಾಗಿದೆ. ಮುಂದಿನ ದಿನಗಳಲ್ಲೂ ಅವರಿಗೆ ನೆರವು ನೀಡುತ್ತೇವೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ