ಗಂಡ ವಿಕ್ಕಿ ಕೌಶಲ್ ಜುಟ್ಟು ಪೂರ್ತಿ ಕತ್ರಿನಾ ಕೈಯಲ್ಲಿ! ನೆಟ್ಟಿಗರ ಆರೋಪ

ಶನಿವಾರ, 2 ಡಿಸೆಂಬರ್ 2023 (12:00 IST)
Photo Courtesy: Twitter
ಮುಂಬೈ: ಬಾಲಿವುಡ್ ರಿಯಲ್ ಲೈಫ್ ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮೇಲೆ ನೆಟ್ಟಿಗರು ಆರೋಪವೊಂದನ್ನು ಮಾಡಿದ್ದಾರೆ.

ಮದುವೆಯಾದ ಬಳಿಕ ಕತ್ರಿನಾ ತನ್ನ ಗಂಡ ವಿಕ್ಕಿ ಕೌಶಲ್ ಉಡುಗೆ ತೊಡುಗೆಗಳ ಬಗ್ಗೆ ಪೂರ್ಣ ನಿಯಂತ್ರಣ ಹೇರಿದ್ದಾರೆ. ಅವರಿಗೆ ಕಳಪೆ ಮಟ್ಟದ ಉಡುಗೆ ತೊಡುಗೆಗಳನ್ನು ನೀಡುತ್ತಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.

ಕೆಲವು ದಿನಗಳ ಮೊದಲು ರಣಬೀರ್ ಕಪೂರ್ ಮೇಲೂ ಇಂತಹದ್ದೇ ಆರೋಪ ಬಂದಿತ್ತು. ಅಲಿಯಾ ಭಟ್ ಯಾವ ರೀತಿಯ ಉಡುಗೆ ತೊಡಬೇಕೆಂದು ರಣಬೀರ್ ನಿರ್ಧರಿಸುತ್ತಾರೆ. ಹೀಗಾಗಿ ರಣಬೀರ್ ಕಂಟ್ರೋಲ್ ಮಾಡುತ್ತಾರೆ ಎಂದು ನೆಟ್ಟಿಗರು ಆರೋಪಿಸಿದ್ದರು. ಬಳಿಕ ಅಲಿಯಾ ಅವರೇ ಟೀಕಾಕಾರರಿಗೆ ತಿರುಗೇಟು ನೀಡಿದ್ದರು.

ಇದೀಗ ಕತ್ರಿನಾ ಮೇಲೂ ಇಂತಹದ್ದೇ ಆರೋಪ ಕೇಳಿಬಂದಿದೆ. ವಿಕ್ಕಿ ಕೌಶಲ್ ತೊಡುವ ಬಟ್ಟೆಗಳು ಅವರಿಗೆ ಸೂಟ್ ಆಗುತ್ತಿಲ್ಲ. ಅವರಿಗೆ ಸೂಟ್ ಆಗುವಂತಹ ಉಡುಗೆ ತೊಡಲು ಕತ್ರಿನಾ ಬಿಡುತ್ತಿಲ್ಲ. ವಿಕ್ಕಿ ಔಟ್ ಫಿಟ್ ಸಂಪೂರ್ಣ ನಿಯಂತ್ರಣವನ್ನು ಕತ್ರಿನಾ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ