ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳ ಜತೆಗೆ ಸದಾ ಸಂಪರ್ಕದಲ್ಲಿರಲು ಕ್ಯಾಟ್ ಫೇಸ್‌ಬುಕ್‌ಗೆ ಎಂಟ್ರಿ ನೀಡಿದ್ದರು. ಅವರು ಟ್ವಿಟರ್‌ಗೂ ಎಂಟ್ರಿ ನೀಡಿ ತಮ್ಮ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿ್ದ್ದಾರೆ.
ಮೂಲಗಳ ಪ್ರಕಾರ, ಟ್ವಿಟರ್‌ನಲ್ಲಿ ಕತ್ರೀನಾ ಪ್ಲ್ಯಾನ್ ಬೇಸ್ ಹೆಚ್ಚಿಸಿಕೊಳ್ಳಲ್ಲಿದ್ದಾರಂತೆ. ಇನ್ನೂ ಮುಂಬರುವ ಚಿತ್ರದ ರಿಲೀಸ್‌ಗಾಗಿ ಕಾಯುತ್ತಿರುವ ಕತ್ರೀನಾ ಕೈಫ್ ಸಿದ್ದಾರ್ಥ ಮಲ್ಹೋತ್ರಾ ಜತೆಗೆ ರೋಮ್ಯಾನ್ಸ್ ಮಾಡಲಿದ್ದಾರೆ.
ಬಾಲಿವುಡ್ ನಟಿ ಕತ್ರೀನಾ ಕೈಫ್ ಬಹಳ ದಿನಗಳ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಎಂಟ್ರಿ ನೀಡಿರೋದು ನಿಮಗೆಲ್ಲರಿಗೂ ಗೊತ್ತು. ಹುಟ್ಟುಹಬ್ಬದ ದಿನದಂದು ಫೇಸ್ಬೇಕ್‌ಗೆ ಎಂಟ್ರಿ ನೀಡಿದ್ದ ಕತ್ರೀನಾ ಟ್ವಿಟರ್‌ನಲ್ಲಿ ತಮ್ಮ ಫಾಲೋವರ್‌ಗಳ ಸಂಖ್ಯೆಯನ್ನು ಮಿಲಿಯನ್‌ಗಟ್ಟಲೆ ಹೆಚ್ಚಿಸಿಕೊಂಡಿದ್ದಾರೆ.
ಕ್ಯಾಟ್ ಮುಂಬರುವ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಿದ್ದಾಳೆ. ಇನ್ನೂ ಆಕೆ ಸೋಷಿಯಲ್ ಮೀಡಿಯಾದಲ್ಲಿ ಎಂಟ್ರಿ ನೀಡುತ್ತಿರುವುದಕ್ಕೆ ಕಾರಣ ಅಂದ್ರೆ ಖಾಸಗಿ ಆಗಿ ಹಾಗೂ ವೃತ್ತಿಗಾಗಿ ಎಂಟ್ರಿ ನೀಡುತ್ತಿದ್ದಾರೆ. ಅಭಿಮಾನಿಗಳ ಜತೆಗೆ ನೇರವಾಗಿ ಸಂಪರ್ಕದಲ್ಲಿರಲು ಕ್ಯಾಟ್ ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.