ಕಿಸ್ಸಿಂಗ್ ದೃಶ್ಯಗಳಿಂದ ಹಿಡಿದು ರೋಮ್ಯಾನ್ಸ್ ಮಾಡುವ ದೃಶ್ಯದ ವರೆಗೆ ಐಶ್ವರ್ಯ 'ಏ ದಿಲ್ ಹೈ ಮುಷ್ಕಿಲ್' ಪಡ್ಡೆ ಹುಡುಗರ ನಿದ್ದೆಗೆಡಿಸಿತ್ತು. ಚಿತ್ರದಲ್ಲಿ ಬಿಂದಾಸ್ ಆಗಿ ನಟಿಸಿರುವ ಐಶ್. ಈ ರೀತಿ ಸೊಸೆ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದು ಬಚ್ಚನ್ ಕುಟುಂಬಕ್ಕೆ ಇಷ್ಟವಿರಲಿಲ್ಲ. ಆದ್ದರಿಂದ ರಣಬೀರ್ ಜತೆಗಿನ ಕೆಲ ದೃಶ್ಯಗಳನ್ನು ತೆಗೆದುಹಾಕುವಂತೆ ಬಚ್ಚನ್ ಕುಟುಂಬ ಹೇಳಿತ್ತು.
ಮೂಲಗಳ ಪ್ರಕಾರ 'ಏ ದಿಲ್ ಹೈ ಮುಷ್ಕಿಲ್' ಚಿತ್ರ ನೋಡಿದ್ರಾ ಎಂದು ಸಲ್ಲುಗೆ ಕೇಳಲಾಗಿತ್ತು. ಈ ವೇಳೆ ಸಲ್ಲು ಅವರಿಂದ ಬಂದ ಉತ್ತರ ನಕಾರಾತ್ಮಕವಾಗಿತ್ತು. ಸಲ್ಲು ಹೇಳಿದ್ದೇನು ಎಂದರೆ, 'ನಾನು ಚಿತ್ರದ ವೀಕ್ಷಿಸಿಲ್ಲ', 'ನೀವೂ ವೀಕ್ಷಿಸಿದ್ರಾ? ಹೇಳಿ ಹೇಗಿದೆ? ಎಂದು ಸಲ್ಮಾನ್ ಉತ್ತರಿಸಿದ್ರಂತೆ'.
ಮತ್ತೊಂದು ಮೂಲಗಳ ಪ್ರಕಾರ, ಸಲ್ಮಾನ್ ವೀಕ್ಷಣೆ ಮಾಡಿದ್ದಾರಂತೆ. ಐಶ್ವರ್ಯ ನಟನೆಯನ್ನು ಮೆಚ್ಚಿದ್ದಾರಂತೆ. ಈ ವೇಳೆ ಟೀಸರ್ ಬಗ್ಗೆ ಕೇಳಲಾದ ಪ್ರಶ್ನೆಗೆ ಸಲ್ಲು ಹೇಳಿದ್ದ ಉತ್ತರ ಹೀಗಿತ್ತು.. 'ಐಶ್ವರ್ಯ ತುಂಬಾ ಬ್ಯೂಟಿಫುಲ್' ಎಂದು ಸಲ್ಲು ಹೇಳಿದ್ರಂತೆ.