ದಬಾಂಗ್ 3 ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದ ಕಿಚ್ಚ ಸುದೀಪ್

ಬುಧವಾರ, 6 ನವೆಂಬರ್ 2019 (09:20 IST)
ಬೆಂಗಳೂರು: ಕಿಚ್ಚ ಸುದೀಪ್ ಖಳನಾಯಕರಾಗಿ ಅಭಿನಯಿಸಿರುವ ಸಲ್ಮಾನ್ ಖಾನ್ ನಾಯಕರಾಗಿರುವ ಬಹುಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾ ದಬಾಂಗ್ 3. ಈ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂಬುದರ ಪಕ್ಕಾ ಡೇಟ್ ನ್ನು ಕಿಚ್ಚ ಸುದೀಪ್ ಅನೌನ್ಸ್ ಮಾಡಿದ್ದಾರೆ.


ಈ ವರ್ಷ ಕ್ರಿಸ್ ಮಸ್ ಗೆ ಚಿತ್ರ ತೆರೆ ಕಾಣಲಿದೆ ಎಂದು ಈಗಾಗಲೇ ಚಿತ್ರತಂಡ ಹೇಳಿತ್ತು. ಇದೀಗ ಕಿಚ್ಚ ಸುದೀಪ್ ಕನ್ನಡ ಪೋಸ್ಟರ್ ಜತೆಗೆ ಡಿಸೆಂಬರ್ 20 ರಂದು ಸಿನಿಮಾ ಬಿಡುಗಡೆಯಾಗುತ್ತಿರುವುದಾಗಿ ಘೋಷಿಸಿದ್ದಾರೆ.

ಈಗಾಗಲೇ ಟೀಸರ್ ಬಿಡುಗಡೆಯಾಗಿದ್ದು, ಸಲ್ಮಾನ್ ಖಾನ್ ಕನ್ನಡದಲ್ಲೇ ಡಬ್ ಮಾಡಿರುವುದು ಕನ್ನಡ ಅಭಿಮಾನಿಗಳಿಗೂ ಖುಷಿ ನೀಡಿದೆ. ಪ್ರಭುದೇವ ಈ ಸಿನಿಮಾದ ನಿರ್ದೇಶಕರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ