ಬಿಗ್ ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ ಕೋಪಕ್ಕೆ ಕಾರಣವಾದ ಚೈತ್ರಾ ವಾಸುದೇವನ್

ಮಂಗಳವಾರ, 29 ಅಕ್ಟೋಬರ್ 2019 (09:47 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಈ ವಾರ ಎಲಿಮಿನೇಟ್ ಆದ ಚೈತ್ರಾ ವಾಸುದೇವನ್ ಯಾರೂ ಮಾಡದ ಕೆಲಸ ಮಾಡಿ ಕಿಚ್ಚ ಸುದೀಪ್ ಕೈಯಲ್ಲಿ ಬೈಸಿಕೊಂಡಿದ್ದಾರೆ.


ಮನೆಯಿಂದ ಎಲಿಮಿನೇಟ್ ಆದ ಮೇಲೆ ಸ್ಪರ್ಧಿಗಳನ್ನು ವೇದಿಕೆ ಮೇಲೆ ಕರೆತಂದು ಕಿಚ್ಚ ಸುದೀಪ್ ಮನೆಯ ಅನುಭವಗಳನ್ನು ಕೇಳುತ್ತಾರೆ. ಈ ಸಂದರ್ಭದಲ್ಲಿ ಚೈತ್ರಾಗೆ ಎಲ್ಲಾ ಸ್ಪರ್ಧಿಗಳಿಗೆ ಮಾಡುವಂತೆ ಮನೆಯಲ್ಲಿ ಕಳೆದ ಕ್ಷಣಗಳ ವಿಡಿಯೋ ತುಣುಕು ತೋರಿಸಲಾಗಿದೆ.

ಆಗ ಚೈತ್ರಾ ಅದರಲ್ಲಿರುವ ಎರಡು ದೃಶ‍್ಯಗಳನ್ನು ಕಿತ್ತು ಹಾಕಿ ಎಂದು ಹುಕುಂ ಮಾಡಿದ್ದು ಸುದೀಪ್ ಸಿಟ್ಟಿಗೆ ಕಾರಣವಾಗಿದೆ. ಇದುವರೆಗೆ ಬಿಗ್ ಬಾಸ್ ಇತಿಹಾಸದಲ್ಲೇ ಯಾರೂ ವಿಡಿಯೋ ತುಣುಕಿನ ಬಗ್ಗೆ ಆಕ್ಷೇಪ ಎತ್ತಿರಲಿಲ್ಲ. ಆದರೆ ನೀವು ಯಾರೂ ಮಾಡದ ಕೆಲಸ ಮಾಡಿದಿರಿ. ಇಂತಹ ವರ್ತನೆ ನಿಮಗೆ ಸರಿಯಲ್ಲ. ಈ ರೀತಿ ಇದ್ದರೆ ಬೆಳೆಯಲು ಕಷ್ಟ ಎಂದು ನೇರವಾಗಿಯೇ ಬೈದು ವೇದಿಕೆಯಿಂದ ಹೊರ ಕಳುಹಿಸಿದ್ದಾರೆ. ವೀಕ್ಷಕರೂ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಕಿಚ್ಚನ ನಡೆಗೆ ಮೆಚ್ಚುಗೆ ಸೂಚಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ