ಸಲ್ಮಾನ್ ಖಾನ್ ಕನ್ನಡ ಮಾತಿಗೆ ಕಿಚ್ಚ ಸುದೀಪ್ ಫಿದಾ

ಗುರುವಾರ, 12 ಸೆಪ್ಟಂಬರ್ 2019 (09:38 IST)
ಬೆಂಗಳೂರು: ದಬಾಂಗ್ 3 ಸಿನಿಮಾದ ಮೋಷನ್ ಪೋಸ್ಟರ್ ನಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಕನ್ನಡದಲ್ಲಿ ಮಾತನಾಡಿರುವುದನ್ನು ಕಿಚ್ಚ ಸುದೀಪ್ ಖುಷಿಯಿಂದಲೇ ಹಂಚಿಕೊಂಡಿದ್ದಾರೆ.


ದಬಾಂಗ್ 3 ಸಿನಿಮಾದಲ್ಲಿ ಸಲ್ಮಾನ್ ಗೆ ವಿಲನ್ ಆಗಿ ಕಿಚ್ಚ ಸುದೀಪ್ ಅಭಿನಯಿಸುತ್ತಿದ್ದಾರೆ. ಈ ಸಿನಿಮಾ ಹಿಂದಿ ಮಾತ್ರವಲ್ಲದೆ ಕನ್ನಡದಲ್ಲೂ ಬಿಡುಗಡೆಯಾಗಲಿದೆ.

ಇದೀಗ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಕನ್ನಡ ಅವತರಣಿಕೆಯಲ್ಲಿ ಸಲ್ಮಾನ್ ತಮ್ಮದೇ ಧ್ವನಿಯಲ್ಲಿ ‘ಟೈಮ್ ನಂದು, ದಾರಿನೂ ನಂದು’ ಎಂದು ಹೇಳಿದ್ದಾರೆ. ಜತೆಗೆ ಈ ವಿಡಿಯೋವನ್ನು ಟ್ವೀಟ್ ಮಾಡಿ ಕನ್ನಡಿಗರ ಬೆಂಬಲವಿರಲಿ ಎಂದು ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ