ಬಿಗ್ ಬಾಸ್ ಸೀಸನ್ 7 ರಲ್ಲಿ ಸಾಮಾನ್ಯ ಜನರಿಗಿಲ್ಲ ಎಂಟ್ರಿ

ಬುಧವಾರ, 11 ಸೆಪ್ಟಂಬರ್ 2019 (09:25 IST)
ಬೆಂಗಳೂರು: ಬಿಗ್ ಬಾಸ್ ಸೀಸನ್ 7 ಸದ್ಯದಲ್ಲೇ ಆರಂಭವಾಗಲಿದೆ ಎಂದು ಕಲರ್ಸ್ ಕನ್ನಡ ವಾಹಿನಿ ಈಗಾಗಲೇ ಸುಳಿವು ನೀಡಿದ್ದು, ಅದರ ಪೂರ್ವ ತಯಾರಿಯನ್ನೂ ಶುರು ಮಾಡಿಕೊಂಡಿದೆ.


ಈ ಬಾರಿಯೂ ಕಿಚ್ಚ ಸುದೀಪ್ ಅವರೇ ನಿರೂಪಕರಾಗಿರುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಸ್ಪರ್ಧಿಗಳ ವಿಚಾರದಲ್ಲಿ ಕೊಂಚ ಬದಲಾವಣೆಯಾಗಲಿದೆ. ಈ ಬಾರಿ ಸಾಮಾನ್ಯ ಜನರಿಗೆ ಪ್ರವೇಶ ನೀಡದೇ ಇರಲು ವಾಹಿನಿ ನಿರ್ಧರಿಸಿದೆ. ಅದರ ಬದಲಾಗಿ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರ ಎಂಟ್ರಿ ನೀಡಲಿದೆ.

ಸಾಮಾನ್ಯ ಜನರಿಗಿಂತ ಸೆಲೆಬ್ರಿಟಿಗಳು ನಿಜ ಜೀವನದಲ್ಲಿ ಹೇಗಿರುತ್ತಾರೆ ಎಂಬುದರ ಬಗ್ಗೆ ಜನರಿಗೆ ಹೆಚ್ಚು ಕುತೂಹಲವಿರುತ್ತದೆ. ಅದೇ ಕಾರಣಕ್ಕೆ ಈ ಬಾರಿ ಕೇವಲ ಸೆಲೆಬ್ರಿಟಿಗಳನ್ನು ಹಾಕಿಕೊಳ್ಳಲಾಗುತ್ತಿದೆಯಂತೆ. ಈ ಬಾರಿಯೂ ವಿವಿಧ ಕ್ಷೇತ್ರದಲ್ಲಿ ಹೆಸರು ಮಾಡಿ 15 ಸ್ಪರ್ಧಿಗಳಿರಲಿದ್ದಾರೆ. ಸದ್ಯದಲ್ಲೇ ಪ್ರೋಮೋ ಶೂಟ್ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ