ದಬಾಂಗ್3 ರಲ್ಲಿ ಕಿಚ್ಚನ ಜತೆಗೆ ಸಲ್ಮಾನ್ ಖಾನ್ ಶರ್ಟ್ ಲೆಸ್ ಫೈಟ್

ಸೋಮವಾರ, 9 ಸೆಪ್ಟಂಬರ್ 2019 (10:07 IST)
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಎಂದರೆ ಶರ್ಟ್ ಲೆಸ್ ಇಮೇಜ್ ಗೆ ಫೇಮಸ್ಸು. ಈಗ ಸಲ್ಮಾನ್ ಮತ್ತೆ ಶರ್ಟ್ ಲೆಸ್ ಆಗುತ್ತಿದ್ದಾರೆ. ಅದೂ ದಬಾಂಗ್ 3 ಸಿನಿಮಾದ ಕ್ಲೈಮ್ಯಾಕ್ಸ್ ಗಾಗಿ.

 

ದಬಾಂಗ್ 3 ಯಲ್ಲಿ ಸಲ್ಮಾನ್ ಖಾನ್ ಗೆ ಖಳನಾಯಕನಾಗಿ ಕಿಚ್ಚ ಸುದೀಪ್ ಅಭಿನಯಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಸಿನಿಮಾದಲ್ಲಿ ಸಲ್ಮನಾ ಜತೆಗೆ ಕಿಚ್ಚ ಭರ್ಜರಿ ಫೈಟಿಂಗ್ ಸೀನ್ ಮಾಡಲಿದ್ದಾರೆ ಎಂಬ ಸುದ್ದಿ ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ.

ಈ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯದ ಶೂಟಿಂಗ್ ನಡೆದಿದ್ದು, ಸಲ್ಮಾನ್ ಶರ್ಟ್ ಲೆಸ್ ಆಗಿ ಕಿಚ್ಚನ ಜತೆ ಫೈಟ್ ಮಾಡಿದ್ದಾರೆ. ಈ ದೃಶ್ಯಕ್ಕಾಗಿ ಸಲ್ಮಾನ್ ತಮ್ಮ ದೇಹವನ್ನು ಹುರಿಗೊಳಿಸಿದ್ದಾರೆ. ಮೂಲಗಳ ಪ್ರಕಾರ ಪ್ರಭುದೇವ ನಿರ್ದೇಶನದ ಈ ಸಿನಿಮಾ ಮುಂದಿನ ವರ್ಷ ತೆರೆಗೆ ಬರುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ