ಖ್ಯಾತ ಗಾಯಕ ಕೆಕೆ ಅಂತ್ಯಕ್ರಿಯೆ

ಗುರುವಾರ, 2 ಜೂನ್ 2022 (15:51 IST)
ಮುಂಬೈ: ಮೇ 31 ರಂದು ಕೋಲ್ಕೊತ್ತಾದಲ್ಲಿ ಲೈವ್ ಕಾರ್ಯಕ್ರಮದ ವೇಳೆ ಅಸ್ವಸ್ಥರಾಗಿ ಹೃದಯಾಘಾತದಿಂದ ನಿಧನರಾದ ಖ್ಯಾತ ಗಾಯಕ ಕೆಕೆ ಅಂತಿಮ ಕ್ರಿಯೆ ಇಂದು ಮುಂಬೈನಲ್ಲಿ ನೆರವೇರಿತು.

ವರ್ಸೋವಾದ ಸ್ಮಶಾನದಲ್ಲಿ ಹಿಂದೂ ಸಂಪ್ರದಾಯದಂತೆ ಕೃಷ್ಣಕುಮಾರ್ ಕುನ್ನತ್ ಅಲಿಯಾಸ್ ಕೆಕೆ ಅಂತಿಮ ವಿಧಿವಿಧಾನಗಳು ನೆರವೇರಿದವರು. ಈ ವೇಳೆ ಅವರ ಕುಟುಂಬಸ್ಥರು ಮತ್ತು ಆಪ್ತರು ಪಾಲ್ಗೊಂಡಿದ್ದರು.

ಇದಕ್ಕೂ ಮೊದಲು ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಗಾಯಕಿ ಶ್ರೇಯಾ ಘೋಷಾಲ್, ಶಂಕರ್ ಮಹದೇವನ್, ಜಾವೇದ್ ಅಖ್ತರ್ ಸೇರಿದಂತೆ ಚಿತ್ರರಂಗದ ಸ್ನೇಹಿತರು ಆಗಮಿಸಿ ಅಂತಿಮ ದರ್ಶನ ಪಡೆದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ