ವಿರಾಟ್ ಕೊಹ್ಲಿಗೆ ಲತಾ ಮಂಗೇಷ್ಕರ್ ವಿಶೇಷ ಬಹುಮಾನ

ಬುಧವಾರ, 14 ಡಿಸೆಂಬರ್ 2016 (11:51 IST)
ಕ್ರಿಕೆಟ್ ಹುಟ್ಟಿದ್ದು ನಮ್ಮ ದೇಶದಲ್ಲೇ ಎಂದು ಎದೆಯುಬ್ಬಿಸಿ ಹೇಳಿಕೊಳ್ಳುವ ಇಂಗ್ಲೆಂಡ್ ತಂಡವನ್ನು ಚಚ್ಚಿಬಿಸಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ವಿಶಿಷ್ಟವಾದ ವ್ಯಕ್ತಿಯೊಬ್ಬರಿಂದ ಅಪರೂಪದ ಬಹುಮಾನ ಸಿಕ್ಕಿದೆ. 235 ರನ್ ಹೊಡೆದು ಕ್ಯಾಪ್ಟನ್ ಇನ್ನಿಂಗ್ಸ್ ಆಡಿದ ಕೊಹ್ಲಿ ತಂಡವನ್ನು ವಿಜಯದ ಕಡೆಗೆ ಕೊಂಡೊಯ್ದರು. 
 
ಮುಂಬೈನ ವಾಂಖಡೆ ಮೈದಾನದಲ್ಲಿ ಆಡಿದ ಆ ಆಟವನ್ನು ನೋಡಿ ಭಾರತದ ಗಾನಕೋಗಿಲೆ ಲತಾ ಮಂಗೇಷ್ಕರ್ ಸಹ ಖುಷಿಯಾಗಿದ್ದಾರೆ. ಈ ಟೆಸ್ಟ್ ಮ್ಯಾಚ್ ಜೊತೆಗೆ ಸೀರೀಸ್ ಸಹ ಕೈವಶ ಮಾಡಿಕೊಂಡ ವಿರಾಟ್‍ರನ್ನು ಕೆಲವರು ಅಭಿನಂದನೆಗಳಲ್ಲಿ ಮುಳುಗೇಳಿದಿದ್ದಾರೆ.
 
ಲತಾ ಸಹ ಅದೇ ರೀತಿ ಕೊಹ್ಲಿಯನ್ನು ಅಭಿನಂದಿಸಬೇಕೆಂದುಕೊಂಡರು. ಆದರೆ ಎಲ್ಲರಂತೆ ಸಾಮಾನ್ಯವಾಗಿ ವಿಶ್ ಮಾಡಿದರೆ ಏನು ಪ್ರಯೋಜನ ಎಂದುಕೊಂಡರೋ ಏನೋ...ತಾನು ಹಾಡಿರುವ ಅದೆಷ್ಟೋ ಗೀತೆಗಳಲ್ಲಿ ಒಂದನ್ನು ಆಯ್ದು ಕೊಹ್ಲಿಗೆ ಗಿಫ್ಟ್ ಆಗಿ ಕೊಟ್ಟಿದ್ದಾರೆ. ಇದಕ್ಕೆ ಕೊಹ್ಲಿ ಸಹ ಅಭಿನಂಧಿಸಿ ಟ್ವೀಟ್ ಮಾಡಿದ್ದಾರೆ. 
 
235 ರನ್ ಹೊಡೆದ ಕೊಹ್ಲಿಗೆ ಅಭಿನಂದನೆಗಳು ಎಂದು ಟ್ವೀಟಿಸಿದ್ದಷ್ಟೇ ಅಲ್ಲದೆ, "ಆಕಾಶ್ ಕೆ ಉಸ್ ಫಾರ್ ಭಿ" ಎಂಬ ಹಾಡಿನ ಯೂಟ್ಯೂಬ್ ಲಿಂಕ್ ಹಾಕಿದರು. ಕೊಹ್ಲಿ ಪ್ರತಿಭೆ ಹೇಗೆಲ್ಲಾ ವಿರಾಟ್ ರೂಪ ಪಡೆಯುತ್ತಿದೆ ಎಂಬುದನ್ನು ಸೂಚ್ಯವಾಗಿ ಹೇಳಲು ಲತಾ ಜೀ ಈ ಹಾಡನ್ನು ಬಹುಮಾನವಾಗಿ ಕೊಟ್ಟಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ