ಊಟ ಎಸೆಯುತ್ತಾರೆ, ಶೂ ಕಾಲಿನಲ್ಲೇ ಬರ್ತಾರೆ: ದರ್ಶನ್ ಕಂಪ್ಲೇಂಟ್ ಒಂದಾ ಎರಡಾ

Krishnaveni K

ಬುಧವಾರ, 3 ಸೆಪ್ಟಂಬರ್ 2025 (10:06 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ತೂಗುದೀಪ ಪರ ವಕೀಲರು ಕೋರ್ಟ್ ನಲ್ಲಿ ನಾನಾ ದೂರು ನೀಡಿದ್ದಾರೆ. ಜೈಲು ಸಿಬ್ಬಂದಿ ಊಟ ಎಸೆಯುತ್ತಾರೆ, ಶೂ ಕಾಲಿನಲ್ಲೇ ರೂಂ ಒಳಗೆ ಬರ್ತಾರೆ ಇತ್ಯಾದಿ.

ದರ್ಶನ್ ಗೆ ಬೆನ್ನು ನೋವಿದೆ, ಈ ಕಾರಣಕ್ಕೆ ಅವರಿಗೆ ಹಾಸಿಗೆ, ದಿಂಬು ನೀಡಬೇಕು ಎಂದು ಅವರ ಪರ ವಕೀಲರು ಕೋರ್ಟ್ ನಲ್ಲಿ ವಾದ ಮಂಡಿಸಿದ್ದಾರೆ. ಈ ವೇಳೆ ಜೈಲಿನಲ್ಲಿ ದರ್ಶನ್ ಅವಸ್ಥೆಯ ಬಗ್ಗೆಯೂ ಕೋರ್ಟ್ ಗಮನಕ್ಕೆ ತಂದಿದ್ದಾರೆ.

ಊಟವನ್ನು ದೂರದಿಂದಲೇ ಎಸೆಯುತ್ತಾರೆ. ಶೂ ಕಾಲಿನಲ್ಲೇ ರೂಂ ಒಳಗೆ ಬರ್ತಾರೆ. ಸುಪ್ರೀಂಕೋರ್ಟ್ ನಲ್ಲಿ ಬೇಲ್ ರದ್ದಾಗಿದ್ದಕ್ಕೆ ಅಮಾನವೀಯವಾಗಿ ನಡೆದುಕೊಳ್ತಿದ್ದಾರೆ. ಸಿಗರೇಟು ಕೇಳಿದ್ರೂ ಕೊಡ್ತಿಲ್ಲ. ಜೈಲಿನ ಮ್ಯಾನ್ಯುವೆಲ್ ನಲ್ಲಿ ಸಿಗರೇಟು ಕೊಡಬಾರದು ಎಂದಿಲ್ಲ. ಆದರೂ ಕೊಡ್ತಿಲ್ಲ. ಜೈಲಿನ ನಿಯಮದ ಪ್ರಕಾರವೂ ಕೊಡಬೇಕಾದ ವಸ್ತುಗಳನ್ನು ಕೊಡಲ್ಲ. ಎಲ್ಲದಕ್ಕೂ ಕೋರ್ಟ್ ಆದೇಶ ಕೊಡಬೇಕು ಅಂತಾರೆ. ಎಲ್ಲವನ್ನೂ ಪುಟಗಟ್ಟಲೆ ಕೋರ್ಟ್ ನಿಂದ ಬರೆಸಿಕೊಂಡು ಹೋಗಕ್ಕೆ ಆಗುತ್ತಾ ಎಂದು ಆಕ್ರೋಶ ಹೊರಹಾಕಿದ್ದಾರೆ.

ಬೇಲ್ ರದ್ದುಗೊಳಿಸುವ ವೇಳೆ ಸುಪ್ರೀಂಕೋರ್ಟ್ ಯಾವುದೇ ವಿಶೇಷ ಸವಲತ್ತು ಕೊಡಬಾರದು ಎಂದಿತ್ತು. ಇದನ್ನು ಜೈಲು ಸಿಬ್ಬಂದಿಗಳು ಖಡಕ್ ಆಗಿ ಪಾಲಿಸುತ್ತಿದ್ದಾರೆ. ಆದರೆ ಇದಕ್ಕೆ ದರ್ಶನ್ ಪರ ವಕೀಲರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ