ತೆರೆ ಮೇಲೆ ಜೋಡಿಯಾಗಿ ನಟಿಸಲು ಒಪ್ಪಿಕೊಂಡ ಮಾಧುರಿ ದೀಕ್ಷಿತ್ ಹಾಗೂ ಸಂಜಯ್ ದತ್

ಮಂಗಳವಾರ, 8 ಮೇ 2018 (07:21 IST)
ಮುಂಬೈ : ಬಾಲಿವುಡ್ ನ ನಾಟ್ಯ ಮಯೂರಿ ಮಾಧುರಿ ದೀಕ್ಷಿತ್ ಹಾಗೂ ನಟ ಸಂಜಯ್ ದತ್ ಅವರು ಬಹಳ ವರ್ಷಗಳ ನಂತರ ಮತ್ತೆ ತೆರೆಮೇಲೆ ಜೋಡಿಯಾಗಿ ನಟಿಸುತ್ತಾರೆ ಎಂಬ ಸುದ್ದಿ ಇದೀಗ ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.


ಇತ್ತಿಚೆಗಷ್ಟೇ ಶ್ರೀದೇವಿ ಅವರು ನಟಿಸಬೇಕಾಗಿದ್ದ ‘ಶಿದ್ದತ್’ ಚಿತ್ರದಲ್ಲಿ, ಅವರ ಪಾತ್ರವನ್ನು ಮಾಧುರಿ ದೀಕ್ಷಿತ್ ಮಾಡಲು ಒಪ್ಪಿಕೊಂಡಿದ್ದರು. ಆದರೆ ಸಂಜಯ್ ದತ್ ಅವರು ಮಾತ್ರ ಮಾಧುರಿ ಜೊತೆ ನಟಿಸಲು ಒಪ್ಪದಿದ್ದಾಗ ಅವರ ಬದಲು ಅನಿಲ್ ಕಪೂರ್ ಅವರನ್ನು ಆಯ್ಕೆಆಡಲಾಗಿತ್ತು.


ಆದರೆ ಇದೀಗ ಈ ಹಿಂದೆ ವೃತ್ತಿ ಜೀವನದಲ್ಲಿ ಇವರಿಬ್ಬರ ಮಧ್ಯೆ ತಲೆದೋರಿದ್ದ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಅಭಿಷೇಕ್ ವರ್ಮ ನಿರ್ದೇಶನ ಮಾಡಲಿರುವ ಚಿತ್ರದಲ್ಲಿ ನಟಿಸಲು ನಟಿ ಮಾಧುರಿ ದೀಕ್ಷಿತ್ ಹಾಗೂ ನಟ ಸಂಜಯ್ ದತ್ ಇಬ್ಬರು ಒಪ್ಪಿಕೊಂಡಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ