ತುಳು ಸಿನಿಮಾಗೆ ಎಂಟ್ರಿ ಕೊಟ್ಟ ಬ್ಯಾಂಗಲ್ ಬಂಗಾರಿ ಖ್ಯಾತಿಯ ಆಂಟೋನಿ, ರೂಪೇಶ್ ಶೆಟ್ಟಿ ಸಿನಿಮಾಗೆ ಗಾಯನ

Sampriya

ಸೋಮವಾರ, 28 ಜುಲೈ 2025 (19:05 IST)
Photo Credit X
ಬೆಂಗಳೂರು: ಬ್ಯಾಂಗಲ್ ಬಂಗಾರಿ ಹಾಡಿನ ಮೂಲಕ ಹವಾ ಸೃಷ್ಟಿಸಿದ  ಗಾಯಕ ಆಂಟೋನಿ ತುಳುವಿನಲ್ಲಿ ಮೊದಲ ಹಾಡು ಹಾಡಲಿದ್ದಾರೆ. 

ನಟ ಯುವರಾಜ್‌ಕುಮಾರ್ ಅಭಿನಯದ ಎಕ್ಕ ಸಿನಿಮಾದ ಬ್ಯಾಂಗಲ್ ಬಂಗಾರಿ ಹಾಡು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಈ ಹಾಡನ್ನು ಹಾಡಿದ ತಮಿಳಿನ ಗಾಯಕ ಆಂಟೋನಿ ಅವರು ತುಳುವಿನಲ್ಲಿ ಮೊದ ಹಾಡು ಹಾಡಲಿದ್ದಾರೆ. 

ಬಿಗ್‌ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಅವರು ಆ್ಯಕ್ಷನ್ ಕಟ್ ಹೇಳಿ ಅಭಿನಯಿಸಿರುವ ಜೈ ಚಿತ್ರದ ಹಾಡಿಗೆ ಇವರು ಧ್ವನಿ ನೀಡಿದ್ದಾರೆ. 

ಈ ವಿಚಾರವನ್ನು ರೂಪೇಶ್ ಶೆಟ್ಟಿ ಅವರೇ ಹೇಳಿಕೊಂಡಿದ್ದಾರೆ. ಅದಲ್ಲದೆ ಸಿನಿಮಾದ ಹಾಡು ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ