ಮಾದಕ ತಾರೆ ಸನ್ನಿ ಲಿಯೋನ್ ಬರ್ತ್ ಡೇ ಆಚರಿಸಿದ ಮಂಡ್ಯ ಅಭಿಮಾನಿಗಳು

ಶನಿವಾರ, 14 ಮೇ 2022 (10:35 IST)
ಮಂಡ್ಯ: ಬಾಲಿವುಡ್ ನ ಮಾದಕ ತಾರೆ ಸನ್ನಿ ಲಿಯೋನ್ ಗೆ ಕರ್ನಾಟಕದಲ್ಲೂ ಅಭಿಮಾನಿಗಳಿದ್ದಾರೆ. ಇಂದು ಅವರ ಜನ್ಮದಿನವಿದ್ದು, ಮಂಡ್ಯದ ಅಭಿಮಾನಿಗಳು ವಿಶಿಷ್ಟವಾಗಿ ಜನ್ಮದಿನ ಆಚರಿಸಿದ್ದಾರೆ.

40 ನೇ ವಂಸತಕ್ಕೆ ಕಾಲಿಡುತ್ತಿರುವ ಸನ್ನಿ ಲಿಯೋನ್ ಕಟೌಟ್ ಹಾಕಿಸಿ, ಅವರ ಹೆಸರಿನಲ್ಲಿ ಬಡವರಿಗೆ ಬಿರಿಯಾನಿ ಹಂಚಿ ಮಂಡ್ಯದ ಯುವಕರು ಮೆಚ್ಚಿನ ತಾರೆಯ ಬರ್ತ್ ಡೇ ಆಚರಿಸಿಕೊಂಡಿದ್ದಾರೆ.

ತೆರೆ ಮೇಲೆ ಹಸಿಬಿಸಿ ದೃಶ್ಯಗಳಲ್ಲಿ ನಟಿಸುವ ಸನ್ನಿ ಲಿಯೋನ್ ನಿಜ ಜೀವನದಲ್ಲಿ ಸಮಾಜಮುಖೀ ಕೆಲಸಗಳನ್ನು ಮಾಡುವ ಮೂಲಕ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ