24 ವರ್ಷದ ದಾಂಪತ್ಯಕ್ಕೆ ಕೊನೆ ಹಾಡಿದ ನಟ ಸೊಹೈಲ್ ಖಾನ್

ಶುಕ್ರವಾರ, 13 ಮೇ 2022 (21:50 IST)
ಮುಂಬೈ: ಬಾಲಿವುಡ್ ನಟ, ಸಲ್ಮಾನ್ ಖಾನ್ ಸಹೋದರ ಸೊಹೈಲ್ ಖಾನ್ ತಮ್ಮ 24 ವರ್ಷದ ದಾಂಪತ್ಯ ಜಿವನ ಕೊನೆಗಾಣಿಸಲು ಹೊರಟಿದ್ದಾರೆ.

ಸೊಹೈಲ್ ಮತ್ತು ಪತ್ನಿ ಸೀಮಾ ವಿಚ್ಛೇದನ ಪಡೆಯಲು ತೀರ್ಮಾನಿಸಿದ್ದು, ಇಂದು ಮುಂಬೈನ ಕೌಟುಂಬಿಕ ನ್ಯಾಯಾಲಯಕ್ಕೆ ಆಗಮಿಸಿ ಇಬ್ಬರೂ ವಿಚ್ಛೇದನದ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.

1998 ರಲ್ಲಿ ಮನೆಯವರ ವಿರೋಧ ಕಟ್ಟಿಕೊಂಡು ಇಬ್ಬರೂ ಓಡಿ ಹೋಗಿ ಮದುವೆಯಾಗಿದ್ದರು. ಈಗ ಇಬ್ಬರು ಮಕ್ಕಳೂ ಇದ್ದಾರೆ. ಆದರೆ ಇತ್ತೀಚೆಗೆ ಕೆಲವು ಸಮಯದಿಂದ ಇಬ್ಬರೂ ಪರಸ್ಪರ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇದೀಗ ಅಧಿಕೃತವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ