ಮತ್ತೆ ಬರ್ತಿದ್ದಾರೆ ಬ್ಯೂಟಿ ಕ್ವೀನ್ ರಮ್ಯಾ..

ಗುರುವಾರ, 19 ಮೇ 2016 (18:24 IST)
ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ಒಂದು ಕಾಲದಲ್ಲ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆ ನಟಿ ಅಂತಾ ಗುರುತಿಸಿಕೊಂಡವರು. ಆದ್ರೆ ರಮ್ಯಾ ಮೇಡಮ್ ಯಾವಾಗ ಸಿನಿಮಾದಿಂದ ದೂರವಾಗಿ ರಾಜಕೀಯಕ್ಕೆ ಕಾಲಿಟ್ರೋ ಅವರನ್ನು ತೆರೆ ಮೇಲೆ ನೋಡೋ ಅವಕಾಶವನ್ನೇ ಅಭಿಮಾನಿಗಳು ಕಳೆದುಕೊಂಡ್ರು, 
ಇನ್ನು ರಮ್ಯಾ ಕೂಡ ನಾನು ಸಿನಿಮಾದಲ್ಲಿ ಅಭಿನಯಿಸಲ್ಲ ಅನ್ನೋ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ರು.
 
ಇನ್ನು ನಾನು ಸಿನಿಮಾದಲ್ಲಿ ಅಭಿನಯಿಸಲ್ಲ ಅಂದಾಗ ರಮ್ಯಾ ನಾನು ಸದ್ಯ ಒಪ್ಪಿಕೊಂಡಿರುವಂತ ಸಿನಿಮಾವನ್ನು ಮುಗಿಸಿ ಬಳಿಕ ಸಿನಿಮಾ ರಂಗದಿಂದ ದೂರವಾಗುತ್ತೇನೆ ಅಂತಾ ಹೇಳಿದ್ರು.ಅಲ್ಲದೇ ಪ್ರಜ್ವಲ್ ದೇವರಾಜ್ ಅವರೊಂದಿಗೆ ದಿಲ್ ಕಾ ರಾಜ್ ಸಿನಿಮಾದಲ್ಲಿ ಅಭಿನಯಿಸಲು ಈಗಾಗಲೇ ಕಾಲ್ ಶೀಟ್ ನೀಡಿದ್ದೇನೆ. 
 
ಅದರಂತೆ ಸಿನಿಮಾವನ್ನು ನಾನು ಮುಗಿಸಿಕೊಡೋದಾಗಿ ರಮ್ಯಾ ಹೇಳಿದ್ದರು. ಹಾಗಾಗ  ದಿಲ್ ಕೀ ರಾಜ್ ಸಿನಿಮಾವೇ ರಮ್ಯಾ ಅವರು ಅಭಿನಯಿಸಿರುವ ಕೊನೆಯ ಸಿನಿಮಾವಾಗಲಿದೆ ಅಂತಾ ಅಭಿಮಾನಿಗಳು ಅಂದುಕೊಂಡಿದ್ದರು. ಹೀಗಿರುವಾಗಲೇ ರಮ್ಯಾ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದಾರೆ.
 
ಕೋಡಿ ರಾಮಕೃಷ್ಣ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ನಾಗರಹಾವು ಸಿನಿಮಾದಲ್ಲಿನ ರಮ್ಯಾ ಅವರ ಫಸ್ಟ್ ಲುಕ್ ರಿಲೀಸ್ ಆಗಿದೆ. ಆರ್ಯನ್ ಸಿನಿಮಾದ ಬಳಿಕ ಇದೇ ಮೊದಲ ಬಾರಿಗೆ ರಮ್ಯಾ ಬಣ್ಣ ಹಚ್ಚಿದ್ದಾರೆ.ರಮ್ಯಾ ಹಳದಿ ಬಣ್ಣದ ಸೀರೆಯಲ್ಲಿ ತುಂಬಾನೇ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ