ಒಂದೇ ಒಂದು ರೂಪಾಯಿ ಮಾತ್ರ ತೆಗೆದುಕೊಂಡ ಹೀರೋ

ಸೋಮವಾರ, 16 ಜನವರಿ 2017 (09:51 IST)
ಸಿನಿಮಾಗಳಲ್ಲಿ ಹೀರೋಗಳ ಸಂಭಾವನೆ ಕೋಟಿಗಳಲ್ಲಿರುತ್ತದೆ. ಸಣ್ಣಪುಟ್ಟ ಕಲಾವಿದರೂ ಈಗ ಕೋಟಿ ಕೇಳುವಂತ ಕಾಲ ಬಂದಿದೆ. ಆ ರೀತಿಯ ಯಾವುದೇ ಸಂಭಾವನೆ ಇಲ್ಲದೆ ಒಬ್ಬ ಹೀರೋ ಬಣ್ಣಹಚ್ಚಿದ್ದಾರೆ. ಯಾರಪ್ಪಾ ಆ ಹೀರೋ ಎಂಬು ಅಚ್ಚರಿಯಾಗುತ್ತಿದೆಯೇ?
 
ಇತ್ತೀಚೆಗೆ ಬಿಡುಗಡೆಯಾದ ’ಹರಾಂಕೋರ್’ ಹಿಂದಿ ಸಿನಿಮಾದ ಹೀರೋ ನವಾಜುದ್ದೀನ್ ಸಿದ್ದಿಖಿ ಸಂಭಾವನೆಯನ್ನೇ ಪಡೆದಿಲ್ಲವಂತೆ. ಕೇವಲ ಒಂದೇ ಒಂದು ರೂಪಾಯಿ ಟೋಕನ್ ಅಡ್ವಾನ್ಸ್ ತೆಗೆದುಕೊಂಡಿದ್ದಾರೆ ಎಂದಿದ್ದಾರೆ ಆ ಚಿತ್ರದ ನಿರ್ದೇಶಕ ಶ್ಲೋಕ್ ಶರ್ಮಾ.
 
ನವಾಜ್ ಅವರೊಂದಿಗೆ ಈ ಸಿನಿಮಾಗಾಗಿ ಕೆಲಸ ಮಾಡಿದ ಬಹಳಷ್ಟು ಮಂದಿ ಸಂಭಾವನೆ ಪಡೆದಿಲ್ಲವಂತೆ. ಕೆಲವರಂತೂ ಅತ್ಯಂತ ಕಡಿಮೆ ಸಂಭಾವನೆ ಪಡೆದರಂತೆ. ಚಿತ್ರಕ್ಕೆ ಬಜೆಟ್ ತುಂಬಾ ಕಡಿಮೆ ಇತ್ತು. ಕಥೆ ಚೆನ್ನಾಗಿದ್ದ ಕಾರಣ ಇವರೆಲ್ಲಾ ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಎಂದಿದ್ದಾರೆ ನಿರ್ದೇಶಕರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ