ಶಾರುಖ್ ಇರುವ ಸೆಟ್ ನಲ್ಲಿ ಯಾರಿಗೂ ಹುಡುಗಿಯರನ್ನು ಟಚ್ ಮಾಡಲೂ ಧೈರ್ಯವಿರಲ್ವಂತೆ!
‘ವೈಯಕ್ತಿಕವಾಗಿ ನಾನು ಯಾವತ್ತೂ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿಲ್ಲ. ಹಾಗೆಯೇ ನನ್ನ ಸಿನಿಮಾ ಸೆಟ್ ನಲ್ಲೂ ಅಂತಹ ಘಟನೆಗಳಾಗಿಲ್ಲ. ನಾನು ಮಹಿಳೆಯರನ್ನು ಗೌರವಿಸುತ್ತೇನೆ ಮತ್ತು ಕೆಲಸದಲ್ಲಿ ಅವರನ್ನೂ ಸಮಾನತೆಯಿಂದ ನೋಡುತ್ತೇನೆ. ನಾನು ಸೆಟ್ ನಲ್ಲಿರುವಾಗ ಮತ್ತು ನನ್ನ ಸಿನಿಮಾ ಸೆಟ್ ನಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಲು ಯಾರೂ ಧೈರ್ಯ ಮಾಡುವುದಿಲ್ಲ’ ಎಂದು ಶಾರುಖ್ ಹೇಳಿಕೊಂಡಿದ್ದಾರೆ.