ಅಪ್ಪನ ಜವಾಬ್ದಾರಿ ಯಾರೂ ಹೇಳಿಕೊಡಬೇಕಾಗಿಲ್ಲ: ಅಭಿಷೇಕ್ ಬಚ್ಚನ್

ಸೋಮವಾರ, 21 ನವೆಂಬರ್ 2016 (14:03 IST)
ಮುಂಬೈ: ಬಾಲಿವುಡ್ ತಾರಾ ಜೋಡಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈಗೆ  ಮುದ್ದಿನ ಮಗಳು ಆರಾಧ್ಯ ಹೊರತಾದ ಲೋಕವಿಲ್ಲ ಎಂದು ಅವರು ಎಷ್ಟೋ ಸಾರಿ ಹೇಳಿಕೊಂಡಿದ್ದಾರೆ. ಮುದ್ದು ಮಗಳ ಅಪ್ಪ ಅಭಿಷೇಕ್ ತಮಗೆ ಅಪ್ಪನ ಜವಾಬ್ದಾರಿ ಯಾರೂ ಹೇಳಿಕೊಡಬೇಕಾಗಿಲ್ಲ ಎಂದಿದ್ದಾರೆ.

“ಅಪ್ಪನ ಕರ್ತವ್ಯಗಳ ಬಗ್ಗೆ ಹಲವು ಜನ ಹಲವು ಸಲಹೆ ಕೊಡುತ್ತಾರೆ. ಆದರೆ ಇದನ್ನು ಯಾರೂ ಹೇಳಿಕೊಡಬೇಕಾಗಿಲ್ಲ. ಅದು ತಾನಾಗೇ ಅರಿವಾಗುತ್ತದೆ. ಮಗುವನ್ನು ಹೇಗೆ ನೋಡಿಕೊಳ್ಳಬೇಕೆಂದು ಯಾರೂ ಕಲಿಸಿಕೊಡಬೇಕಾಗಿಲ್ಲ” ಎಂದು ಅಭಿ ಹೇಳಿಕೊಂಡಿದ್ದಾರೆ.

ಇಂತಿಪ್ಪ ಅಭಿಷೇಕ್ ತನಗೆ ಹಾಗೂ ಪತ್ನಿ ಐಶ್ವರ್ಯಾಗೆ ಆರಾಧ್ಯಗಿಂತ ಹೆಚ್ಚು ಯಾವುದೂ ಇಲ್ಲವಂತೆ. ಎಂತಹದ್ದೇ ಕೆಲಸವಿರಲಿ, ಯಾವುದೇ ಭಿನ್ನಾಭಿಪ್ರಾಯಗಳಿರಲಿ, ಎಲ್ಲವೂ ಅವಳನ್ನು ಗಮನದಲ್ಲಿಟ್ಟುಕೊಂಡು ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಯಾವುದೇ ನಿರ್ಧಾರವಾದರೂ ಅವಳನ್ನು ದೃಷ್ಟಿಯಲ್ಲಿಟ್ಟುಕೊಂಡು ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ