ಶಾರಾಖ್‌ ಖಾನ್‌ಗೆ ಗಿಫ್ಟ್ ನೀಡಲು ಹೋಗಿ ಜೈಲು ಸೇರಿದ ಪಾಕ್ ಅಭಿಮಾನಿ

ಶನಿವಾರ, 27 ಆಗಸ್ಟ್ 2016 (17:22 IST)
ಜಿಂಕೆ ಚರ್ಮದಿಂದ ಮಾಡಿದ ಪಾದರಕ್ಷೆ ನಿಷೇಧ.. ಆದ್ರೂ ವ್ಯಕ್ತಿಯೊಬ್ಬ ನಟ ಶಾರೂಖ್ ಖಾನ್‌ಗೆ ಗಿಫ್ಟ್ ಕೊಡಲು ಹೋಗಿ ಜೈಲು ಸೇರಿರುವ ಘಟನೆ ನಡೆದಿದೆ. ಪೇಶಾವರದಲ್ಲಿ ಘಟನೆ ನಡೆದಿದ್ದು, ಅಲ್ಲಿನ ವನ್ಯಜೀವಿ ಅಧಿಕಾರಿಗಳು ಪಾದರಕ್ಷೆ ಮಾರಾಟಗಾರನೊಬ್ಬನನ್ನು ಬಂಧಿಸಿದ್ದಾರೆ.
 
ಜಹಾಂಗೀರ್ ಎಂಬಾತ ಶಾರೂಖ್ ಖಾನ್ ಅಭಿಮಾನಿ. ಬಾಲಿವುಡ್ ನಟ ಶಾರೂಖ್ ಸಂಬಂಧಿಯೊಬ್ಬರು ಎರಡು ಚಪ್ಪಲಿಗಳನ್ನು ಆರ್ಡರ್ ಮಾಡಿದ್ದಾರೆ. ದೊಡ್ಡ ಸ್ಟಾರ್ ಮಾಡಿರುವುದನ್ನು ಕಂಡು ಜಹಾಂಗೀರ್ ಜಿಂಕೆಯಿದ ಮಾಡಿದ್ದ ಚಪ್ಪಲಿಗಳನ್ನು ನೀಡಿದ್ದ, ಅಲ್ಲದೇ ಸಾಮಾಜಿಕ ಮಾಧ್ಯಗಳಲ್ಲಿ ಜಿಂಕೆ ಚಪ್ಪಲಿ ಕುರಿತು ಹೇಳಿಕೊಂಡಿದ್ದ.
 
ಆದ್ರೆ ವನ್ಯಜೀವಿಗಳನ್ನು ಭೇಟೆಯಾಡುವುದಾಗಲಿ, ಅವುಗಳಿಂದ ವಸ್ತುಗಳನ್ನು ತಯಾರಿಸುವುದು ನಿಷೇಧ. ಆದ್ರೆ ಈ ವ್ಯಕ್ತಿ ನಿಯಮ ಮೀರಿದ್ದಾನೆ. ಆದ್ದರಿಂದ ಅಧಿಕಾರಿಗಳು ಆತನನ್ನು ಅರೆಸ್ಟ್ ಮಾಡಿ ಜೈಲಿನಲ್ಲಿಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ