ಮಾಸ್ಕ್ ಹಾಕ್ಕೊಂಡು ಪೋಸು ಕೊಟ್ಟಿರುವ ಈ ಫೋಟೋದ ಸೆಟ್‍ನಲ್ಲಿ ತುಂಬಾ ಧೂಳು ಕಾಣುತ್ತಿದೆ. ಆದರೆ ಅವರ ಕಾಮೆಂಟ್ ಈ ರೀತಿ ಇತ್ತು, ನೋಡಿ ಎಷ್ಟು ಚೆನ್ನಾಗಿದೆ ನಮ್ಮ ಪ್ರೊಡಕ್ಷನ್ ಎಂದು ಹಾಕಿದ್ದರು. ಚಿತ್ರತಂಡವೆಲ್ಲಾ ಮಾಸ್ಕ್ ಹಾಕ್ಕೊಂಡು ಆರೋಗ್ಯ ಕಾಪಾಡಿಕೊಳ್ಳುತ್ತಿದೆ ಎಂಬರ್ಥದಲ್ಲಿ ಕಾಮೆಂಟ್ ಹಾಕಿದ್ದಾರೆ.
ಆದರೆ ಫೋಟೋ ನೋಡಿದರೆ ಮಾತ್ರ ಇನ್ನೊಂದು ತರಹ ಇದೆ. ಚಿತ್ರದಲ್ಲಿ ಪರಿಣೀತಿ ಮಾತ್ರ ಮಾಸ್ಕ್ ಹಾಕ್ಕೊಂಡಿದ್ದಾರೆ, ಆದರೆ ಉಳಿದವರು ಹಾಗೆಯೇ ಕಸ ತಳ್ಳುತ್ತಿರುವುದನ್ನು ಕಾಣಬಹುದು. ಒಟ್ನಲ್ಲಿ ಈ ಫೋಟೋ ಹಾಕಿ ಗೊಂದಲ ಮೂಡಿಸಿದ್ದಾರೆ ಪರಿಣೀತಿ ಚೋಪ್ರಾ. ಮೇರಿ ಪ್ಯಾರಿ ಬಿಂದು ಚಿತ್ರ ಮೇ.12,2017ಕ್ಕೆ ತೆರೆಗೆ ಬರಲಿದೆ.