ಲಾಲ್ ಸಿಂಗ್ ಛಡ್ಡಾಗೆ ಮತ್ತೆ ಸಂಕಷ್ಟ: ನಿಷೇಧಕ್ಕೆ ಆಗ್ರಹಿಸಿ ದೂರು
ಕೋಲ್ಕೊತ್ತಾದಲ್ಲಿ ಸಿನಿಮಾ ನಿಷೇಧಕ್ಕೆ ಆಗ್ರಹಿಸಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿದೆ. ಸಿನಿಮಾದಲ್ಲಿ ಸೈನಿಕರನ್ನು ಆಕ್ಷೇಪಾರ್ಹವಾಗಿ ಚಿತ್ರಿಸಲಾಗಿದೆ. ಇದು ಶಾಂತಿ ಕದಡಬಹುದು. ಹೀಗಾಗಿ ಥಿಯೇಟರ್ ನಲ್ಲಿ ಗಲಾಟೆ ಆದರೂ ಅಚ್ಚರಿಯಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈಗಾಗಲೇ ಉತ್ತರ ಪ್ರದೇಶದಲ್ಲಿ ಸಿನಿಮಾದಲ್ಲಿ ಹಿಂದೂ ದೇವರಿಗೆ ಅವಮಾನ ಮಾಡಲಾಗಿದೆ ಎಂದು ಚಿತ್ರ ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟನೆಗಳು ನಡೆದಿತ್ತು.