ಶಾರುಖ್ ಖಾನ್ ‘ಪಠಾಣ್’ಗೂ ಶುರುವಾಯ್ತು ಬಹಿಷ್ಕಾರದ ಭೀತಿ
ಇದೀಗ ಹೃತಿಕ್ ರೋಷನ್ ಅಭಿನಯದ ವಿಕ್ರಮ್ ವೇದಾ ಸಿನಿಮಾಗೂ ಇದೇ ಭೀತಿ ಶುರುವಾಗಿದೆ. ಇದರ ಜೊತೆಗೆ ಈಗ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ವಿರುದ್ಧವೂ ಬಹಿಷ್ಕಾರದ ಅಭಿಯಾನ ಶುರುವಾಗಿದೆ.
2023 ರಲ್ಲಿ ಬಿಡುಗಡೆಯಾಗಲಿರುವ ಪಠಾಣ್ ಸಿನಿಮಾ ಬಹಿಷ್ಕರಿಸುವಂತೆ ನೆಟ್ಟಿಗರು ಕರೆ ಶುರು ಮಾಡಿದ್ದಾರೆ. ಈ ಹಿಂದೆ ಶಾರುಖ್ ಖಾನ್ ಭಾರತದಲ್ಲಿ ಅಸಹಿಷ್ಣುತೆ ಇದೆ ಎಂದಿದ್ದರು. ಅದೇ ಹೇಳಿಕೆ ಉಲ್ಲೇಖಿಸಿ ಶಾರುಖ್ ಸಿನಿಮಾವನ್ನು ಬಹಿಷ್ಕರಿಸಲು ಕರೆ ನೀಡಲಾಗುತ್ತಿದೆ.