ಕಾರು ಹೋಯ್ತು, ಸ್ಕೂಟರ್ ಬಂತು! ಮುಂಬೈ ಬೀದಿಯಲ್ಲಿ ಕೊಹ್ಲಿ-ಅನುಷ್ಕಾ ದ್ವಿಚಕ್ರ ಸವಾರಿ

ಭಾನುವಾರ, 21 ಆಗಸ್ಟ್ 2022 (07:55 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ, ವಿಶ್ವದ ಶ್ರೀಮಂತ ಕ್ರಿಕೆಟಿಗ ವಿರಾಟ್ ಕೊಹ್ಲಿ ಮುಂಬೈ ಬೀದಿಗಳಲ್ಲಿ ಸಾಮಾನ್ಯರಂತೇ ಸ್ಕೂಟರ್ ರೈಡ್ ಮಾಡಿ ಸುದ್ದಿಯಾಗಿದ್ದಾರೆ.

ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ತಮ್ಮ ದುಬಾರಿ ಕಾರುಗಳನ್ನು ಬಿಟ್ಟು ಹೆಲ್ಮೆಟ್ ಏರಿಸಿಕೊಂಡು ಸ್ಕೂಟಿಯಲ್ಲಿ ಸವಾರಿ ಮಾಡಿದ್ದಾರೆ. ವಿಶೇಷವೆಂದರೆ ಹೆಲ್ಮೆಟ್ ತೊಟ್ಟುಕೊಂಡಿದ್ದರಿಂದ ಪಕ್ಕದಲ್ಲಿದ್ದ ವಾಹನ ಸವಾರರೂ ಅವರನ್ನು ಗುರುತಿಸಿಲ್ಲ.

ಕೊಹ್ಲಿ ದಂಪತಿ ಎಲ್ಲೇ ಹೋದರೂ ಅಭಿಮಾನಿಗಳು ಮುತ್ತಿಗೆ ಹಾಕುತ್ತಾರೆ. ಆದರೆ ಕೊಹ್ಲಿ ದಂಪತಿಯನ್ನು ಯಾರೂ ಗುರುತಿಸದೇ ಇದ್ದಿದ್ದರಿಂದ ಇಬ್ಬರೂ ಸ್ಕೂಟಿ ರೈಡ್ ಎಂಜಾಯ್ ಮಾಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ