ಅಭಿಮಾನಿಗಳ ಒತ್ತಡಕ್ಕೆ ಮಣಿದು ಕೊನೆಗೂ ಈ ಕೆಲಸಕ್ಕೆ ಮುಂದಾದ ಪ್ರಭಾಸ್

ಶುಕ್ರವಾರ, 12 ಏಪ್ರಿಲ್ 2019 (07:39 IST)
ಹೈದರಾಬಾದ್: ಬಾಹುಬಲಿ ನಂತರ ದೇಶಾದ್ಯಂತ ಜನಪ್ರಿಯರಾಗಿರುವ ಪ್ರಭಾಸ್ ಈಗ ಅಭಿಮಾನಿಗಳ ಒತ್ತಡಕ್ಕೆ ಮಣಿದು ಇನ್ ಸ್ಟಾಗ್ರಾಂಗೆ ಅಡಿಯಿಡಲಿದ್ದಾರೆ ಎಂಬ ಸುದ್ದಿ ಬಂದಿದೆ.


ಪ್ರಭಾಸ್ ಹೆಸರಿನಲ್ಲಿ ಅದೆಷ್ಟೋ ಖಾತೆಗಳು ಇನ್ ಸ್ಟಾಗ್ರಾಂನಲ್ಲಿವೆ. ಆದರೆ ಅಧಿಕೃತವಾಗಿ ಪ್ರಭಾಸ್ ಇನ್ ಸ್ಟಾಗ್ರಾಂನಲ್ಲಿರಲಿಲ್ಲ. ಆದರೆ ಅಭಿಮಾನಿಗಳು ಒತ್ತಾಯಿಸುತ್ತಿರುವುದರಿಂದ ಇನ್ ಸ್ಟಾಗ್ರಾಂ ಖಾತೆ ತೆರೆಯಲು ಪ್ರಭಾಸ್ ಚಿಂತನೆ ನಡೆಸಿದ್ದಾರಂತೆ.

ಪ್ರಭಾಸ್ ವೃತ್ತಿ ಮತ್ತು ವೈಯಕ್ತಿಕ ಜೀವನದ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಕುತೂಹಲ ಹೊಂದಿರುವ ಅಭಿಮಾನಿಗಳು ಇನ್ ಸ್ಟಾಗ್ರಾಂ ಖಾತೆ ತೆರೆಯಲು ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಪ್ರಭಾಸ್ ಫೇಸ್ ಬುಕ್ ಪೇಜ್ ಹೊಂದಿದ್ದು, 10 ಮಿಲಿಯನ್ ಗಿಂತಲೂ ಹೆಚ್ಚು ಫಾಲೋವರ್ ಗಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ