ರಾಜ್ ನಿಡಿಮೋರು ಜತೆಗಿನ ಡೇಟಿಂಗ್ ವದಂತಿ ಬೆನ್ನಲ್ಲೇ ವಿದೇಶದಲ್ಲಿ ಒಟ್ಟಾಗಿ ಆತ್ಮೀಯವಾಗಿ ಕಾಣಿಸಿಕೊಂಡ ಸಮಂತಾ

Sampriya

ಬುಧವಾರ, 9 ಜುಲೈ 2025 (16:23 IST)
Photo Credit X
ನಟ ನಾಗಚೈತನ್ಯ ಅವರಿಂದ ದುರವಾದ ಬಳಿಕ ನಟಿ ಸಮಂತಾ ಅವರ ಹೆಸರು ಆಗಾಗು ಸಿನಿಮಾ ನಿರ್ದೇಶಕ ರಾಜ್‌ ನಿಡಿಮೋರು ಜತೆ ತಳುಕು ಹಾಕಿಕೊಂಡಿದೆ. ಇವರಿಬ್ಬರು ಡೇಟಿಂಗ್‌ನಲ್ಲಿದ್ದಾರೆಂಬ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಇದೀಗ ಸಮಂತಾ ಅವರು ಹಂಚಿಕೊಂಡಿರುವ ಪೋಸ್ಟ್ ಮತ್ತಷ್ಟು ಕುತೂಹಲವನ್ನು ಮೂಡಿಸಿದೆ. 

ರಾಜ್ ನಿಡಿಮೋರು ಜತೆಗೆ ಆತ್ಮೀಯವಾಗಿ ನಿಂತಿರುವ ಫೋಟೋವನ್ನು ಸಮಂತಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ವಿದೇಶ ಪ್ರವಾಸದ ಕೆಲ ಪೋಟೋಗಳನ್ನು ಸಮಂತಾ ಶೇರ್ ಮಾಡಿದ್ದಾರೆ. 

ಅದರಲ್ಲಿ ರಾಜ್ ನಿಡಿಮೋರು ಜತೆಗೆ ಸಮಂತಾ ಆತ್ಮೀಯವಾಗಿ ನಿಂತು ಮಾತಿನಲ್ಲಿ ತೊಡಗಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಇವರಿಬ್ಬರು ಡೇಟಿಂಗ್‌ನಲ್ಲಿರುವುದು ನಿಜ ಎಂದು ಅವರ ಅಭಿಮಾನಿಗಳು ಹೇಳಿದ್ದಾರೆ. 

ಮಂಗಳವಾರ, ಸಮಂತಾ ಅವರು ಮಿಚಿಗನ್‌ನ ಡೆಟ್ರಾಯಿಟ್‌ಗೆ ತನ್ನ ಪ್ರವಾಸದ ಹಲವಾರು ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ, ಅಲ್ಲಿ ಅವರು ತೆಲುಗು ಅಸೋಸಿಯೇಷನ್ ​​ಆಫ್ ನಾರ್ತ್ ಅಮೇರಿಕಾ (TANA) 2025 ಆವೃತ್ತಿಯಲ್ಲಿ ಭಾಗವಹಿಸಿದ್ದರು. ರಾಜ್ ನಿಡಿಮೋರು ಜತೆಗೆ ಸಮಂತಾ ಇರುವ ಫೋಟೋ ಮತ್ತಷ್ಟು ಊಹಾಪೋಹಗಳನ್ನು ಹೆಚ್ಚು ಮಾಡಿದೆ. 



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ