ಅಮೇರಿಕಾದ ವೈಟ್‌ಹೌಸ್‌ನ ಅತಿಥಿಯಾಗಲಿದ್ದಾರೆ ಪ್ರಿಯಾಂಕಾ ಛೋಪ್ರಾ
ಗುರುವಾರ, 28 ಏಪ್ರಿಲ್ 2016 (13:46 IST)
ಪ್ರಿಯಾಂಕಾ ಛೋಪ್ರಾ ಅಮೇರಿಕಾದ ವೈಟ್ ಹೌಸ್‌ನಲ್ಲಿ ಕರೆಸ್ಪೆಂಡೆಟ್ ಡಿನ್ನರ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಅಮೇರಿಕಾದ ಅಧ್ಯಕ್ಷ ಬರಾತ ಒಬಮಾ ಜತೆ ಡಿನ್ನರ್ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ..
ಇದೇ ವಿಕೆಂಡ್‌ನಲ್ಲಿ ಅಮೇರಿಕಾದ ವೈಟ್ ಹೌಸ್‌ನಲ್ಲಿ ಸಮಾರಂಭ ಜರುಗಲಿದೆ. ಕ್ವಾಂಟಿಕೋದ ಗ್ಲೋಬಲ್ ಸಿರಿಯಲ್‌ಗಳಲ್ಲಿ ಮಿಂಚಿದ್ದ ಪ್ರಿಯಾಂಕಾ ಛೋಪ್ರಾ, ಅಮೇರಿಕಾದಲ್ಲಿ ಹಲವು ಜನರ ಮನ ಗೆದಿದ್ದಾರೆ.
ಪ್ರಿಯಾಂಕಾ ಛೋಪ್ರಾ ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್ ನಲ್ಲೂ ತಮ್ಮ ಪ್ರತಿಭೆ ಹೊರಹಾಕಿದ್ದಾರೆ. ಹಾಲಿವುಡ್‌ನ 'ಬೈ ವಾಚ್' ಮೂವೀಯಲ್ಲಿ ಪ್ರಿಯಾಂಕಾ ಅಭಿನಯಿಸಿದ್ದಾರೆ. ಮೊನ್ನೆ ತಾನೆ ಶೂಟಿಂಗ್ ಮುಗಿಸಿಕೊಂಡು ಬಂದಿದ್ದಾರೆ ಪಿಗ್ಗಿ. ಕ್ವಾಂಟಿಕೋದಲ್ಲಿ ಚಿತ್ರದ ಶೂಟಿಂಗ್ ನಿಂದ ಭಾರತಕ್ಕೆ ವಾಪಸ್ಸಾಗಿದ್ದಾರೆ ಪ್ರಿಯಾಂಕಾ.
ಯೆಸ್, ಪ್ರಿಯಾಂಕಾ ಚೋಪ್ರಾ ಅಮೆರಿಕಾದ ವೈಟ್ ಹೌಸ್ ಕರೆಸ್ಪಾಂಡೆಂಟ್ ಡಿನ್ನರ್ ಸಮಾರಂಭಕ್ಕೆ ಆಹ್ವಾನ ಬಂದಿದೆ. ಅಮೆರಿಕಾದ ವೈಟ್ ಹೌಸ್ ನಲ್ಲಿ ನಡೆಯುವ ಡಿನ್ನರ್ ಪಾರ್ಟಿಯಲ್ಲಿ ಪ್ರಿಯಾಂಕಾ ಅವರನ್ನು ಆಹ್ವಾನ ನೀಡಲಾಗಿದೆಯಂತೆ. ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮ ಜತೆ ಭೋಜನಕೂಟದಲ್ಲಿ ಪಿಗ್ಗಿ ಪಾಲ್ಗೊಳ್ಳಲಿದ್ದಾರೆ. ಇದೇ ಶನಿವಾರ ಎಂದರೆ ಏಪ್ರಿಲ್ 30ರಂದು ಸಮಾರಂಭ ಹಮ್ಮಿಕೊಳ್ಳಲಾಗಿದೆ.