ನೀರವ್ ಮೋದಿ ಒಡೆತನದ ಜ್ಯುವೆಲರಿ ಬ್ರಾಂಡ್ ಒಂದರ ಜಾಹೀರಾತಿನಲ್ಲಿ ಬಾಲಿವುಡ್ ನಟ ಸಿಧಾರ್ಥ್ ಮಲ್ಹೋತ್ರಾ ಮತ್ತು ಪ್ರಿಯಾಂಕಾ ಚೋಪ್ರಾ ನಟಿಸಿದ್ದರು. ಪ್ರಿಯಾಂಕಾ ಅವರ ಕಾನೂನು ತಂಡವು ನಟಿಗೆ ಮೋಸ ಮಾಡಲಾಗಿದೆ ಮತ್ತು ಈವರೆಗೂ ಬಾಕಿ ಮೊತ್ತ ಪಾವತಿಸಿಲ್ಲ ಎಂದು ಆರೋಪಿಸಿದ್ದಾರೆ, ಸಿಧಾರ್ಥ್ ಮಲ್ಹೋತ್ರಾ ಅವರಿಗೂ ಸಹ ಬಾಕಿ ಹಣ ಬರಬೇಕಾಗಿದ್ದು, ಕಾನೂನು ಹೋರಾಟ ನಡೆಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.