ಪ್ರಖ್ಯಾತಿಗೆ ಹೆಸರೇ ಅದು ಪ್ರಿಯಾಂಕಾ ಛೋಪ್ರಾ, ಬಾಲಿವುಡ್ ಇರಲಿ ಅಥವಾ ಹಾಲಿವುಡ್ ಇರಲಿ ಯಾವುದಕ್ಕೂ ಸೈ ಎನ್ನುವ ನಟಿಯರಲ್ಲಿ ಪ್ರಿಯಾಂಕಾ ವಿಭಿನ್ನ ಮನೋಭಾವದವರು. ಸದಾ ಪಾಸಿಟಿವ್ ಆಗಿರುವ ಪಿಗ್ಗಿಗೆ ಅಭಿನಯ, ನಟನೆ ಅಂದ್ರೆ ಅಷ್ಟೇ ಸಲೀಸು. ಚಿತ್ರರಂಗದಲ್ಲಿ ಯಾವುದೇ ಗಾಡ್ ಫಾದರ್‌ಗಳಿಲ್ಲದೇ ನೆಲೆಯೂರಿದ ಹುಡುಗಿ. ಆದ್ದರಿಂದ ಅವರು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇಂದು ಬೇ ವಾಚ್ ಬೆಡಗಿ ಪ್ರಿಯಾಂಕಾ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.