ಎಡವಟ್ಟು ಮಾಡಿಕೊಂಡ ನಟ ವಿಜಯ್​ ದೇವರಕೊಂಡ: ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದೇಕೆ

Sampriya

ಶುಕ್ರವಾರ, 2 ಮೇ 2025 (15:25 IST)
Photo Courtesy X
ಹೈದರಾಬಾದ್‌: ತೆಲುಗು​ ನಟ ವಿಜಯ್ ದೇವರಕೊಂಡ ವಿರುದ್ಧ ಹೈದರಾಬಾದ್​ನ ಎಸ್​.ಆರ್​.ನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಾಗಿದೆ.

ಬುಡಕಟ್ಟು ಜನರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ನಟನ ವಿರುದ್ಧ ದೂರು ನೀಡಲಾಗಿದೆ. ಸೂರ್ಯ ಅಭಿನಯದ ರೆಟ್ರೋ ಚಿತ್ರ ಪ್ರೀ ಇವೆಂಟ್​ ವೇಳೆ ವಿಜಯ್ ಮಾಡಿದ ಹೇಳಿಕೆಗಳಿಗಾಗಿ ಹೈದರಾಬಾದ್ ಮೂಲದ ವಕೀಲ ಲಾಲ್ ಚೌಹಾಣ್ ಅವರು ವಿಜಯ್ ವಿರುದ್ಧ ದೂರು ದಾಖಲಿಸಿದ್ದಾರೆ.

ಪಹಲ್ಗಾಮ್​ ಭಯೋತ್ಪಾದಕ ದಾಳಿಯ ಬಗ್ಗೆ ಮಾತನಾಡುತ್ತಿದ್ದಾಗ ನಟ ವಿಜಯ್, ಈ ದಾಳಿಗಳು ನೂರಾರು ವರ್ಷಗಳ ಹಿಂದಿನ ಬುಡಕಟ್ಟು ಸಮುದಾಯಗಳ ನಡುವಿನ ಘರ್ಷಣೆಗಳಿಗೆ ಹೊಲುತ್ತದೆ ಎಂದು ಹೇಳಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬುಡಕಟ್ಟು ಸಂಘಗಳು ಕೂಡ ಅವರ ಹೇಳಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಖಂಡಿಸಿವೆ. ವಿಜಯ್ ಅವರ ಹೇಳಿಕೆಗಳು ತಮ್ಮನ್ನು ಅವಮಾನಿಸಿವೆ ಎಂದು ಅವರು ಆರೋಪಿಸಿದ್ದು, ತಕ್ಷಣ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.

ಭಾರತವು ಪಾಕಿಸ್ತಾನದ ಮೇಲೆ ದಾಳಿ ಮಾಡುವ ಅಗತ್ಯವಿಲ್ಲ. ಏಕೆಂದರೆ ಪಾಕಿಸ್ತಾನಿಗಳು ಸ್ವತಃ ತಮ್ಮ ಸರ್ಕಾರದಿಂದ ಬೇಸತ್ತಿದ್ದಾರೆ ಮತ್ತು ಇದು ಮುಂದುವರಿದರೆ ಅವರ ಮೇಲೆ ದಾಳಿ ಮಾಡುತ್ತಾರೆ. ನಿಜವಾಗಲೂ 500 ವರ್ಷಗಳ ಹಿಂದೆ ಬುಡಕಟ್ಟು ಜನಾಂಗದವರು ಹೊಡೆದಾಡಿಕೊಳ್ಳುತ್ತಿದ್ದರು. ಇವರು ಬುದ್ಧಿ ಇಲ್ಲದೆ, ಕನಿಷ್ಠ ಸಾಮಾನ್ಯ ಜ್ಞಾನವಿಲ್ಲದೆ ಮಾಡುವ ಕೆಲಸಗಳು ಎಂದು ವಿಜಯ್‌ ಹೇಳಿದ್ದರು. ಇದು ಅವರಿಗೆ ಸಂಕಷ್ಟಕ್ಕೆ ತಂದಿಟ್ಟಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ