ಇದ್ದಕ್ಕಿದ್ದಂತೆ ರಾಗಿಣಿ ದ್ವಿವೇದಿ ಕಪ್ಪಗಾಗಿದ್ದು ಯಾಕೆ?

ಶುಕ್ರವಾರ, 20 ಮೇ 2016 (12:29 IST)
ನಟ ನಟಿಯರು ಅಂದ್ರೆ ಹಾಗೇನೇ. ಅವರ ಆಗಾಗ್ಗೆ ತಮ್ಮ ಪಾತ್ರಗಳಿಗೆ ತಕ್ಕಂತೆ ನಾನಾ ಕಸರತ್ತುಗಳನ್ನು ಮಾಡುತ್ತಲೇ ಇರುತ್ತಾರೆ. ಒಬ್ಬ ತೆಳ್ಳಗಾಗಬೇಕಾಗುತ್ತೆ. ಮತ್ತೊಮ್ಮೆ ದಪ್ಪ ಆಗಬೇಕಾಗುತ್ತೆ. ಇಲ್ಲಾ ಇನ್ನ್ಯಾವುದೋ ರೀತಿಯಲ್ಲಿ ತಮ್ಮ ದೇಹ ಸೌಂದರ್ಯವನ್ನು ಬದಲಾಯಿಸಿಕೊಳ್ಳಬೇಕಾಗುತ್ತೆ. ಇದೀಗ ಅದೇ ಸರದಿ ನಟಿ ರಾಗಿಣಿ ಅವರದ್ದು.
ರಾಗಿಣಿ ಅವರು ಸದ್ಯ ಕಿಚ್ಚು ಅನ್ನೋ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಬೆಂಗಳೂರು 560028 ಸಿನಿಮಾದ ನಿರ್ದೇಶಕರು ನಿರ್ದೇಶಿಸುತ್ತಿರುವ ಸಿನಿಮಾವಿದು. ಸಿನಿಮಾದಲ್ಲಿ ರಾಗಿಣಿ ವಿಭಿನ್ನವಾದ ಪಾತ್ರವೊಂದನ್ನು ಮಾಡುತ್ತಿದ್ದಾರೆ. 
 
ಸಿನಿಮಾದಲ್ಲಿ ಅವರು ಕಾಫಿ ತೋಟದಲ್ಲಿ ಕೆಲಸ ಮಾಡುವ ಮಹಿಳೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಫಿ ತೋಟದಲ್ಲಿ ಕೆಲ ಮಾಡುವ ಮಹಿಳೆ ಅಂದ ಮೇಲೆ ಅವರು ಬಿಸಿಲಿನಲ್ಲಿ ದುಡಿದು ಕಪ್ಪಗಿರೋದು ಸಾಮಾನ್ಯ. ರಾಗಿಣಿ ಅವರು ಕೂಡ ಅವರಂತೆ ನೈಜವಾಗಿ ತೆರೆ ಮೇಲೆ ಕಾಣಬೇಕು ಅಂತಾ ಅವರಂತೆ ಕಪ್ಪಗಾಗಿದ್ದಾರೆ.
 
ಅಯ್ಯೋ! ಕಪ್ಪಗಾಗೋದಕ್ಕೆ ರಾಗಿಣಿ ಮೇಡಮ್ ಅಂತಹದ್ದು ಏನ್ ಮಾಡಿದ್ರಪ್ಪಾ ಅಂತಾ ತಲೆ ಕೆಡಿಸಿಕೊಳ್ಳಬೇಡಿ. ಪಾತ್ರಕ್ಕಾಗಿ ನಾನು ಏನ್ ಬೇಕಾದ್ರು ಮಾಡೋದಕ್ಕೆ ಸೈ ಅನ್ನುವ ರಾಗಿಣಿ ಬಿಸಿಲಿನಲ್ಲಿ ನಿಂತು ಕೊಂಚ ಕಪ್ಪಾಗಿದ್ದಾರಂತೆ. ಇನ್ನು ಈ ಸಿನಿಮಾದಲ್ಲಿ ರಾಗಿಣಿ ಅವರ ಜೊತೆ ಧ್ರುವ ಸರ್ಜಾ,  ಸಾಯಿಕುಮಾರ್, ಸುಚೇಂದ್ರ ಪ್ರಸಾದ್  ಅವರು ಕೂಡ ಅಭಿನಯಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ