ರಜನಿಕಾಂತ್ ಅವರ ಅಭಿನಯದ 2.0 ಚಿತ್ರದ ಟೀಸರ್ ಲೀಕ್; ಮಗಳು ಸೌಂದರ್ಯ ಕೆಂಡಮಂಡಾಲವಾಗಿದ್ದು ಯಾಕೆ ಗೊತ್ತಾ…?
ಶುಕ್ರವಾರ, 9 ಮಾರ್ಚ್ 2018 (06:38 IST)
ಚೆನ್ನೈ : ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಭಿನಯದ 2.0 ಚಿತ್ರದ ಟೀಸರ್ ರಿಲೀಸ್ ಗೂ ಮೊದಲೇ ಲೀಕ್ ಆಗಿದ್ದು, ಈ ಹಿನ್ನಲೆಯಲ್ಲಿ ರಜನಿಕಾಂತ್ ಅವರ ಮಗಳು ಸೌಂದರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ಮಾಡಿದ್ದ ಟೀಸರನ್ನು ಯಾರೋ ಕಿಡಿಗೇಡಿಗಳು ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರಿಂದ ಆ ವಿಡಿಯೋ ಈಗ ವೈರಲ್ ಆಗಿದೆ. ಇದರಿಂದ ರಜನಿಕಾಂತ್ ಅವರ ಅಭಿಮಾನಿಗಳಿಗೆ ಹಾಗೇ ಚಿತ್ರತಂಡಕ್ಕೆ ಬೇಸರ ಮೂಡಿಸಿದ್ದಲ್ಲದೇ ದೊಡ್ಡ ಮೊತ್ತದ ಬಜೆಟ್ ಇರುವ ಈ ಚಿತ್ರದ ಟೀಸರ್ ನ್ನು ಅದ್ದೂರಿಯಾಗಿ ಬಿಡುಗಡೆ ಮಾಡಬೇಕೆಂದು ಆಸೆ ಹೊಂದಿದ್ದ ರಜನಿಕಾಂತ್ ಅವರ ಮಗಳು ಸೌಂದರ್ಯ ಅವರ ಆಕ್ರೋಶಕ್ಕೂ ಇದು ಕಾರಣವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ