'ಕಬಾಲಿ' ಚಿತ್ರ ಆನ್‌ಲೈನ್‌ನಲ್ಲಿ ಲೀಕ್?

ಮಂಗಳವಾರ, 19 ಜುಲೈ 2016 (14:53 IST)
ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಕಬಾಲಿ' ಆನ್‌ಲೈನ್‌ನಲ್ಲಿ ಲೀಕ್ ಆಗಿದೆ ಎಂದು ಹೇಳಲಾಗುತ್ತಿದೆ. ಚಿತ್ರ ರಿಲೀಸ್ ಆಗುತ್ತದೆ ಎಂದು ತಲೈವಾ ಅಭಿಮಾನಿಗಳು ಕಾಯುತ್ತಿದ್ದರು. ಆದ್ರೆ ಚಿತ್ರ ರಿಲೀಸ್‌ಗೂ ಮುನ್ನವೇ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ ಎನ್ನಲಾಗುತ್ತಿದೆ. ಈ ಕುರಿತು ಚಿತ್ರ ನಿರ್ಮಾಪಕರು ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. 


ಆದ್ರೆ ಚಿತ್ರ ರಿಲೀಸ್‌ಗೂ ಮುನ್ನವೇ ಆನ್‌ಲೈನ್‌ನಲ್ಲಿ ಗ್ರೇಟ್ ಗ್ರ್ಯಾಂಡ್ ಮಸ್ತಿ ಹಾಗೂ ಉಡ್ತಾ ಪಂಜಾಬ್ ಚಿತ್ರಗಳು ಲೀಕ್ ಆಗಿದ್ದವು. 
ಅದೇ ರೀತಿ ಇದೀಗ ಕಬಾಲಿ ಚಿತ್ರವು ಕೂಡ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ ಎಂಬುದರ ಬಗ್ಗೆ ಸುದ್ದಿ ಹಬ್ಬಿದೆ. 

ಮೊನ್ನೆ ಮೊನ್ನೆ ತಾನೇ ಉಡ್ತಾ ಪಂಜಾಬ್ ಸಿನಿಮಾ ಆನ್ಲೈನ್‌ನಲ್ಲಿ ಲೀಕ್ ಆಗಿ ಭಾರೀ ಸುದ್ದಿಯಾಗಿತ್ತು. ಸಿನಿಮಾ ತಂಡ ಈ ಬಗ್ಗೆ ಸೈಬರ್ ಪೊಲೀಸರಿಗೆ ದೂರು ಸಹ ನೀಡಿತ್ತು. ಇನ್ನೂ ರಿಲೀಸ್ ಆಗುವ ಮುನ್ನವೇ ಗ್ರೇಟ್ ಗ್ರ್ಯಾಂಡ್ ಮಸ್ತಿ ಸಿನಿಮಾ ಕೂಡ ಸಂಕಷ್ಟಕ್ಕೆ ಸಿಲುಕಿತ್ತು. 
 
ಸುಲ್ತಾನ್ ಸಿನಿಮಾ ಕೂಡ ಇದೇ ರೀತಿ ಸೋರಿಕೆಯಾಗಿತ್ತು. ಹೀಗೆ ಒಂದರ ಹಿಂದೆ ಒಂದು ಸಿನಿಮಾಗಳು ರಿಲೀಸ್‌ಗೂ ಮುನ್ನವೇ ಆನ್ ಲೈನ್ ನಲ್ಲಿ ಸೋರಿಕೆಯಾಗುತ್ತಿರೋದನ್ನು ನೋಡಿದ್ರೆ ನಿಜಕ್ಕೂ ಶಾಕ್ ಆಗುತ್ತೆ. ಸಿನಿಮಾ ರಿಲೀಸ್ ಮಾಡುವ ಸಿನಿಮಾ ತಂಡಗಳು ಭಯದಲ್ಲೇ ತಮ್ಮ ಸಿನಿಮಾವನ್ನು ರಿಲೀಸ್ ಮಾಡುವಂತಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ